ಗಾಂಜಾ ಮಾರಾಟ: ಆರೋಪಿಗೆ ನಾಲ್ಕು ವರ್ಷ ಕಠಿಣ ಶಿಕ್ಷೆ, 25000 ರೂ. ದಂಡ ವಿಧಿಸಿ ತೀರ್ಪು ಪ್ರಕಟ !

0
2467

ಚಿಕ್ಕಮಗಳೂರು : ಗಾಂಜಾ ಮಾರಾಟ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

2015 ಡಿಸೆಂಬರ್ 3 ರಂದು ನಗರದ ಶಂಕರಪುರದಲ್ಲಿ ಆರೋಪಿ ಪೈರೋಜ್ ಯಾನೆ ಬಾಂಬೆ ಪೈರೋಜ್ ತನ್ನ ವಾಸದ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಣ್ಣ-ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಮಾರಾಟ ಮಾಡುತ್ತಿದ್ದಾಗ ಪೊಲೀಸ್ ಅಧಿಕಾರಿ ಮೊಹಮ್ಮದ್ ಸಲಿಂ ಅಬ್ಬಾಸ್ ದಾಳಿ ನಡೆಸಿದ್ದರು.

ಆರೋಪಿ ಬಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಬೀಜ ಮಿಶ್ರಿತ 2.800 ಕೆ.ಜಿ ಗಾಂಜಾ ಸೊಪ್ಪನ್ನು ತುಂಬಿರುವ ಸಣ್ಣ-ಸಣ್ಣ ಪ್ಯಾಕೆಟ್‌ಗಳ ಕವರ್ ಇರುವ 10 ಬಂಡಲ್ ಗಳು ಪೋಲಿಸರು ವಶಪಡಿಸಿಕೊಂಡಿದ್ದರು.

ಗಾಂಜಾ ಸೊಪ್ಪನ್ನು ಪಂಪಾ ನಗರದ ಸಲೀಂ ಯಾನೆ ಮಿಂತಿ ಸಲೀಂ ಹಾಗೂ ಆಸೀಫ್ ಇವರು ಪೈರೋಜ್‌ಗೆ ತಂದು ಕೊಟ್ಟು, ಗಾಂಜಾ ಮಾರಾಟ ಮಾಡಿ ಬರುವ ಹಣದಲ್ಲಿ ಶೇ.10 ಹಣವನ್ನು ಕೊಡುವುದಾಗಿ ಹೇಳಿದ್ದರು ಎಂದು ಆರೋಪಿಸಲಾಗಿತ್ತು.

ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶುಭ ಗೌಡರ್ ಪೈರೋಜ್ ಅಲಿಯಾಸ್ ಬಾಂಬೆ ಪೈರೋಜ್‌ಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದ್ದಲ್ಲಿ ಪುನಃ 8 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಉಳಿದ ಆರೋಪಿಗಳ ವಿಚಾರಣೆ ಪ್ರತ್ಯೇಕವಾಗಿ ನಡೆಯುತ್ತಿದೆ.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಭಾವನ ವಾದಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here