ಗಾಂಜಾ ಸೊಪ್ಪು ಮಾರಾಟಗಾರರ ಮೇಲೆ ಡಿಸಿಐಬಿ ಪೊಲೀಸ್ ತಂಡ ದಾಳಿ: ಮಾಲು ಸಹಿತ ಇಬ್ಬರ ಬಂಧನ

0
766

ತರೀಕೆರೆ: ತಾಲೂಕಿನ ಅತ್ತಿಗನಾಳು ಗ್ರಾಮದ ಡ್ಯಾಂಪುರ ಎಂಬಲ್ಲಿ ಶುಕ್ರವಾರ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಈ ದಾಳಿಯ ವೇಳೆ ಆರೋಪಿಗಳಾದ ತರೀಕೆರೆಯ ಎಂ.ತಿಮ್ಮಯ್ಯ ಬೀದಿ ವಾಸಿಯಾದ ಶಕೀಲ್ ಬಿನ್ ಸಾಬ್ ಜಾನ್ ಸಾಬ್ ಮತ್ತು ಭದ್ರಾವತಿಯ ಸೀಗೆಬಾಗೆ ವಾಸಿಯಾದ ರೋಷನ್ ಬಿನ್ ಇಮ್ತಿಯಾಜ್ ಇವರನ್ನು ವಶಕ್ಕೆ ಪಡೆದು ಇವರಿಂದ ಸುಮಾರು 80,000 ರೂ. ಬೆಲೆಯ 8 ಕೆಜಿ 100 ಗ್ರಾಂ. ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಪೊಲೀಸ್ ನಿರೀಕ್ಷಕರು, ತರೀಕೆರೆ ಪೊಲೀಸ್ ಠಾಣೆ ರವರಿಗೆ ವರದಿ ನೀಡಿದ್ದು ಆರೋಪಿಗಳ ವಿರುದ್ಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.

ಈ ದಾಳಿಯು ಅಕ್ಷಯ್ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ ಇವರ ಮಾರ್ಗದರ್ಶನದಲ್ಲಿ ಸತ್ಯನಾರಾಯಣ ಕೆ, ಪೊಲೀಸ್ ನಿರೀಕ್ಷಕರು, ಡಿ.ಸಿ.ಐ.ಬಿ, ಚಿಕ್ಕಮಗಳೂರು, ಪುದ್ದು ಪಿ.ಎಸ್.ಐ, ಡಿಸಿಐಬಿ ಹಾಗೂ ಸಿಬ್ಬಂದಿಗಳಾದ ರಂಗಯ್ಯ ಎ.ಎಸ್.ಐ, ವೀರೇಂದ್ರ ಎ.ಎಸ್.ಐ, ಶೇಷಪ್ಪಶೆಟ್ಟಿ, ಮಹೇಶ, ರವೀಂದ್ರ, ಭರತ್ ಕುಮಾರ್, ನಟರಾಜ್ ಇವರುಗಳು ನಡೆಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here