ಗಾಂಧೀಜಿ ಧೀಮಂತ ನಾಯಕ ಎಂ.ಕೆ ಪ್ರಾಣೇಶ್

0
128

ಅಜ್ಜಂಪುರ: ಗಾಂಧೀಜಿ ತಮ್ಮ ಜೀವನದ ಸಂಪೂರ್ಣ ಸಮಯವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಸಾರ್ವಜನಿಕರ ಹಿತಕ್ಕಾಗಿ ಮುಡಿಪಾಗಿಟ್ಟ ಧೀಮಂತ ನಾಯಕರು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.

ಅಲ್ಲಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆದ ಸ್ವಚ್ಛ ವಾಹಿನಿ, ಕಸದ ಬುಟ್ಟಿ ವಿತರಣೆ ಮತ್ತು ಗ್ರಾಮಗಳ ಸಮಗ್ರ ಸ್ವಚ್ಛತಾ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಸರ್ಕಾರ ಗಾಂಧೀಜಿ ಅವರ ಯೋಚನೆ, ಕಲ್ಪನೆಗಳನ್ನಿಟ್ಟುಕೊಂಡು ದೇಶದ ಸ್ವಚ್ಚತ ಅಭಿಯಾನದಂತಹ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ, ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ನಾವು ಸ್ವಚ್ಚವಾಗಿಟ್ಟುಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಗ್ರಾಮಗಳಲ್ಲಿನ ಚರಂಡಿ, ರಸ್ತೆ ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಕದೆ ನಿರ್ದಿಷ್ಟ ಸ್ಥಳಗಳಲ್ಲಿ ಕಸವನ್ನು ವಿಲೇವಾರಿ ಮಾಡುವುದರಿಂದ ಗ್ರಾಮಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬಹುದು ಎಂದರು.

ಗ್ರಾಮ ಪಂಚಾಯಿತಿ ಚುನಾಯಿತ ಅಧ್ಯಕ್ಷ, ಸದಸ್ಯರುಗಳಿಗೆ ತಮ್ಮ ಗ್ರಾಮಗಳ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪರಿಚಯವಿರುವುದರಿಂದ ತನ್ನ ಗ್ರಾಮದ ಸಮಸ್ಯೆಗಳನ್ನು ಅರಿತು, ಬಗೆಹರಿಸುವುದರೊಂದಿಗೆ ಮೂಲ ಸೌಕರ್ಯ ಕಲ್ಪಿಸಬಹುದಾಗಿದೆ ಎಂದು ತಿಳಿಸಿದರು.

ಶಾಸಕ ಸಿ. ಟಿ. ರವಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಬದುಕಿನ ಪ್ರೇರಣೆಯನ್ನು ಪಡೆದು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಸ್ವಚ್ಚತೆ ಎಲ್ಲಿ ಇರುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ ಹಾಗೆಯೇ ನಮ್ಮ ಮನಸಿನಲ್ಲಿ ಸ್ವಚ್ಚತಾ ಮನೋಭವವನ್ನು ಇಟ್ಟುಕೊಂಡರೆ ಸಮಾಜವನ್ನು ಕೂಡ ಸ್ವಚ್ಚತೆಯಿಂದ ಇಟ್ಟುಕೊಳ್ಳಬಹುದು ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here