ಗಾಂಧೀ ಘರ್‌ ಗ್ರಾಮ ಬಳಿಯ ಹೆದ್ದಾರಿ ಮೇಲೆ ಉರುಳಿದ ಮರ: ಸಂಚಾರ ಬಂದ್‌

0
188

ಮೂಡಿಗೆರೆ: ಜಿಲ್ಲೆಯ ವಿವಿಧೆಡೆ ಸೋಮವಾರ ಮಧ್ಯಾಹ್ನ ಡಿಢಿರನೆ ಗುಡುಗು-ಮಿಂಚಿನ ಆರ್ಭಟ ಜೊತೆಗೆ ಮಳೆಯಾಗಿದ್ದರ ಪರಿಣಾಮ ತಾಲ್ಲೂಕಿನ ಗಾಂಧೀ ಘರ್‌ ಗ್ರಾಮದ ಸಮೀಪ ಹೆದ್ದಾರಿ ಬದಿಯ ವೃಕ್ಷವೊಂದು ನೆಲಕ್ಕುರುಳಿದ್ದು, ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ರಸ್ತೆಯ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಬೇಲೂರು, ಸಕಲೇಶಪುರ, ಹಾಸನ ಹಾಗೂ ಮಂಗಳೂರು ಕಡೆಗಿನ ಸಂಚಾರ ಬಂದ್‌ ಆಗಿತ್ತು ನಂತರ ಸ್ಥಳೀಯರ ಸಹಾಯದಿಂದ ತೆರವುಗೊಳಿಸಲಾಯಿತು.

ಇದರ ಜೊತೆಗೆ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಪಟ್ಟಣದ ವಾಹನ ನಿಲುಗಡೆ ಪ್ರದೇಶದಲ್ಲಿ ನೀರು ಆವರಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here