ಗಾಳಿ, ನೀರು ಖಾಲಿಯಾಗಬಹುದಾದ ಸಂಪತ್ತು ; ಹೆಚ್.ಜಿ. ಅರುಣ್ ಕುಮಾರ್

0
519

ಹೊಸನಗರ: ಗಾಳಿ ಮತ್ತು ನೀರು ಖಾಲಿಯಾಗಬಹುದಾದ ಸಂಪನ್ಮೂಲಗಳು ಎಂದು ಸಾರ ಸಂಸ್ಥೆಯ ಸಂಸ್ಥಾಪಕ, ಕಲಾವಿದ ಹೆಚ್. ಜಿ. ಅರುಣ್ ಕುಮಾರ್ ಹೇಳಿದರು.

ಇಂದು ಬೆಳಿಗ್ಗೆ ಬಟ್ಟೆಮಲ್ಲಪ್ಪದಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲ ಹಾಗೂ ಅರಣ್ಯ ಇಲಾಖೆ ಹಾಗೂ ಸಾರ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನರಿಗೆ ಗಾಳಿ ಮತ್ತು ನೀರಿನ ಬಗ್ಗೆ ಸ್ಪಷ್ಟ ಜ್ಞಾನವಿಲ್ಲ. ನಾವು ಈಗಾಗಲೇ ಮಾಡಿರುವ ಹಲವು ತಪ್ಪುಗಳಿಂದ ಪರಿಸರ ಈಗಾಗಲೇ ನಾಶವಾಗಿದೆ. ಇದು ಇನ್ನೂ ನಿಲ್ಲದೆ ಹೋದಲ್ಲಿ ನಮ್ಮ ಮಕ್ಕಳನ್ನು ಅತ್ಯಂತ ಅಪಾಯದ ಸ್ಥಿತಿಗೆ ಕೊಂಡೊಯ್ಯುತ್ತೇವೆ. ಇದರಿಂದ ಮನುಷ್ಯ ಕುಲವೇ ನಾಶವಾದರೂ ಅಚ್ಚರಿ ಇಲ್ಲ ಎಂದು ಎಚ್ಚರಿಸಿದರು.

ಆರ್. ಎಫ್. ಓ ರಾಘವೇಂದ್ರ ಮಾತನಾಡಿ, ಜಗತ್ತು ಪರಿಸರ ನಾಶದಿಂದ ಅತ್ಯಂತ ವಿಷಮ ಸ್ಥಿತಿಗೆ ತಲುಪುತ್ತಿದೆ, ಅದರಲ್ಲೂ ಅರಣ್ಯ ನಾಶ ಇಡೀ ಪರಿಸರದ ಅಸಮತೋಲನಕ್ಕೆ ಕಾರಣವಾಗಬಲ್ಲದು. ಹೀಗಾಗಿ ತಕ್ಷಣವೇ ಅರಣ್ಯ ಉಳಿವಿಗೆ ನಾವೆಲ್ಲ ಕಂಕಣ ಬದ್ಧರಾಗಬೇಕು ಎಂದರು.

ಶ್ರೀ ವ್ಯಾಸ ಮಹರ್ಷಿ ಗುರುಕುಲ ಪ್ರತಿವರ್ಷ ಸಾವಿರ ಸಂಖ್ಯೆಯ ಬೀಜದುಂಡೆಗಳನ್ನು ಸಿದ್ದಗೊಳಿಸಿ ದೇವರ ಕಾಡಿನಲ್ಲಿ ಬಿತ್ತನೆ ಮಾಡುತ್ತಿದೆ. ಈ ಬಾರಿ ಕೂಡ ಬೀಜದುಂಡೆಗಳನ್ನು ರೆಡಿ ಮಾಡಿದ್ದು, ಕೇಶವಪುರದ ದೇವರ ಕಾಡಿನಲ್ಲೂ ಬಿತ್ತನೆ ಮಾಡಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಹೇಳಿದರು.

ಕಾರ್ಯಕ್ರಮದಲ್ಲಿ ಪರಿಸರ ಹೋರಾಟಗಾರ, ಕಲಾವಿದ ಏಸು ಪ್ರಕಾಶ್, ಸಾರ ಕುಮಾರ್, ಧನುಷ್, ಶಿವಕುಮಾರ್, ಹರತಾಳು ಗ್ರಾ.ಪಂ. ಅಧ್ಯಕ್ಷ ಕಲ್ಲಿ ಯೋಗೇಂದ್ರ, ಎಂ.ಸಿ.ಎ. ನಿರ್ದೇಶಕ ತೀರ್ಥಶ್, ಅರಣ್ಯಧಿಕಾರಿಗಳಾದ ದೊಡ್ಮನಿ, ಅನಿಲ್, ದೇವರಾಜ್, ರಾಜು, ಪುಟ್ಟಸ್ವಾಮಿ, ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ದೊಂಬೆಕೊಪ್ಪ ಸರ್ವೇ ನಂಬರ್ 6ರಲ್ಲಿ ಕಾರ್ಯಕ್ರಮ ಅಂಗವಾಗಿ ಬೀಜದುಂಡೆ ಮತ್ತು ಬೀಜಗಳನ್ನು ಬಿತ್ತನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿಗಳು, ಶಿಕ್ಷಕರು, ಹಾಗೂ ಶ್ರೀ ರಾಮಕೃಷ್ಣ ವಿದ್ಯಾಲಯ ಮಕ್ಕಳು, ಶಿಕ್ಷಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here