ಗಿರೀಶ್ ಆಚಾರ್ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು: ಎಸ್.ಆರ್. ಹಿರೇಮಠ್ ಆಗ್ರಹ

0
800

ಶಿವಮೊಗ್ಗ: ಅರಣ್ಯ ನಾಶ, ಅಕ್ರಮ ಗಣಿಗಾರಿಕೆ ಹಾಗೂ ಡಿನೋಟಿಫಿಕೇಶನ್ ವಿರುದ್ದ ಹೋರಾಟ ನಡೆಸುತ್ತಿರುವ ಜನಸಂಗ್ರಾಮ ಪರಿಷತ್ತಿನ ಸದಸ್ಯ ಹೊಸನಗರ ತಾಲ್ಲೂಕಿನ ಪುಣಜೆ ಗ್ರಾಮದ ಗಿರೀಶ್ ಆಚಾರ್ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಹಲ್ಲೆಗೊಳಗಾಗಿರುವ ಗಿರೀಶ್‌ಗೆ ರಕ್ಷಣೆ ನೀಡುವಂತೆ ಜನಸಂಗ್ರಾಮ ಪರಿಷತ್‌ನ ಸ್ಥಾಪಕ ಎಸ್.ಆರ್. ಹಿರೇಮರ್ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.8 ರಂದು ಕೆಲಸದ ನಿಮಿತ್ತ ಬೈಂದೂರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಗಿರೀಶ್ ಆಚಾರ್ ಅವರನ್ನು ನಗರ ಸಮೀಪದ ಮತ್ತಿಮನೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ತಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಅವರಿಗೆ ಹಿಂಸೆ ನೀಡಲಾಗಿದೆ. ಈ ಸಂದರ್ಭದಲ್ಲಿ ಬಂದ ಪೊಲೀಸ್ ಜೀಪ್‌ನಲ್ಲಿ ಗಿರೀಶ್ ಆಚಾರ್ಯರನ್ನು ಠಾಣೆಗೆ ಕರೆದುಕೊಂಡು ಹೋಗಿ ಮಹಿಳಾ ದೌರ್ಜನ್ಯದ ಸುಳ್ಳು ಕೇಸು ದಾಖಲಿಸಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ದೂರಿದ ಅವರು, ಅಕ್ರಮ ಮರಳುಗಾರಿಕೆ, ಟಿಂಬರ್‌ ಮಾಫಿಯಾ, ಕಲ್ಲು ಗಣಿಗಾರಿಕೆ ಮೊದಲಾದವುಗಳ ವಿರುದ್ದ ಗಿರೀಶ್‌ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಇವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ 2017 ರಲ್ಲಿ ಮಾಡಲಾಗಿರುವ ಅರಣ್ಯ ಭೂಮಿ ಡಿನೋಟಿಫಿಕೇಶನ್ ಸಂಬಂಧ ಗಿರೀಶ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಈ ಡಿನೋಟಿಫಿಕೇಷನ್ ಕೇಂದ್ರದ ಅನುಮತಿ ಇಲ್ಲದೆ ಮಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಇಂತಹ ಹೋರಾಟ ಮಾಡಿಕೊಂಡು ಬಂದಿರುವ ಅವರ ಮೇಲೆ ಈಗ ಹಲ್ಲೆ ಮಾಡಲಾಗಿದೆ. ಈ ಹಿಂದೆಯೂ ಮೂರು ಬಾರಿ ಹಲ್ಲೆ ನಡೆಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಜನಸಂಗ್ರಾಮ ಪರಿಷತ್ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ, ನಗರ್ಲೆ ವಿಜಯಕುಮಾರ್, ಟಿ.ಎಂ.ಶಿವಕುಮಾರ್, ಅಖಿಲೇಶ್ ಚಿಪ್ಪಳಿ, ಪ್ರತಿಮಾ ಕೆ.ಆರ್‌. ನಾಯಕ್, ಗಿರೀಶ್ ಆಚಾರ್ಯ, ಕೆ.ಟಿ.ರಮೇಶ್ ಮತ್ತಿತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here