ಗುಡ್ಡದಮಠ ಗದ್ದುಗೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

0
389

ರಿಪ್ಪನ್‌ಪೇಟೆ: ಸಮೀಪದ ಶೆಟ್ಟಿಬೈಲು ಗ್ರಾಮದ ಗುಡ್ಡದಮಠದ ಲಿಂಗೈಕ್ಯರಾದ ಶ್ರೀಗಳ ಗದ್ದುಗೆ ನಿರ್ಮಾಣ ಮತ್ತು ಶೀಲವಂತ ಚೌಡಮ್ಮ ದೇವಸ್ಥಾನದ ಅಭಿವೃದ್ದಿ ಕಾಮಗಾರಿಗೆ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ 5 ಲಕ್ಷ ರೂ. ಅನುದಾನ ಮಂಜೂರಾಗಿ ಗದ್ದುಗೆ ನಿರ್ಮಾಣ ಕಾಮಗಾರಿಗೆ ಕವಲೆದುರ್ಗ ಮಹಾಮಹತ್ತಿನ ಭುವನಗಿರಿ ಮಠದ ಡಾ. ಸಿದ್ದಲಿಂಗ ಮಹಾಸ್ವಾಮೀಜಿ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಜಿ ಶಂಕುಸ್ಥಾಪನೆ ನೆರವೇರಿಸಿದರು.

ಶಂಕುಸ್ಥಾಪನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಕವಲೆದುರ್ಗ ಮಹಾಮಹತ್ತಿನ ಭುವನಗಿರಿ ಮಠದ ಡಾ.ಸಿದ್ದಲಿಂಗ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಸರ್ಕಾರ ಮಠದ ಜೀರ್ಣೋದ್ದಾರ ಕಾರ್ಯಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕಾಗಿತು ಆದರೆ ಕೊರೊನಾ ಮಹಾಮಾರಿಯಿಂದಾಗಿ ಅನುದಾನ ಮಂಜೂರಾತಿಯಲ್ಲಿ ಕಡಿಮೆ ಹಣವನ್ನು ಬಿಡುಗಡೆ ಮಾಡಿದೆ. ಅದರೂ ಬಂದಿರುವ ಅಲ್ಪಮೊತ್ತದಲ್ಲಿ ಮಠದ ಜೀರ್ಣೋದ್ದಾರ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವಂತೆ ಸಲಹೆ ನೀಡಿ, ಮಂಬರುವ ಜಿಲ್ಲಾ ತಾಲ್ಲೂಕ್ ಹಾಗೂ ಸಂಸದರ ಶಾಸಕರ ಅನುದಾನವನ್ನು ತರುವ ಕುರಿತು ಚರ್ಚ್ ನಡೆಸುವುದಾಗಿ ಹೇಳಿದರು.

ಈ ಹಿಂದೆ ಇಲ್ಲಿ ಮಠವೊಂದು ಇತ್ತು ಎನ್ನುವುದಕ್ಕೆ ಮಠದ ಹೆಸರಿನಲ್ಲಿ ಸಾಕಷ್ಟು ಜಮೀನು ಇದ್ದು ಅದನ್ನು ಉಳುವವನೆ ಹೊಲದೊಡ್ಡಯ ಹೋರಾಟದಲ್ಲಿ ಉಳುಮೆ ಮಾಡುವವರ ಪಾಲಾಗಿದೆ ಈಗಲು ಆರ್.ಟಿ.ಸಿ ದಾಖಲೆಯಲ್ಲಿ ಮಠದ ಹೆಸರಿನಲ್ಲಿ ದಾಖಲೆ ಲಭ್ಯವಾಗುತ್ತಿದೆ. ಇದರ ಭೂ ಮಾಲೀಕರು ಮಠದ ಅಭಿವೃದ್ದಿಗೆ ಭೂಮಿಯಲ್ಲ ಬಂದ ಅದಾಯದ ಅಲ್ಪ ಸ್ವಲ್ಪ ಹಣವನ್ನು ದಾನಮಾಡಿದಲ್ಲಿ ತಮ್ಮ ಕುಟುಂಬದ ಏಳಿಗೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಮೂಲೆಗದ್ದೆ ಮಠದ ಮ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮಿಜಿ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.

ಹುಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಲ್ಲವಿ, ಉಪಾಧ್ಯಕ್ಷ ದೇವೇಂದ್ರಪ್ಪ, ಎಪಿಎಂಸಿ ನಿರ್ದೇಶಕ ಬಂಡಿ ರಾಮಚಂದ್ರ, ಗ್ರಾ.ಪಓಟಂ.ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್, ಮಂಜುನಾಥ, ವೆಂಕಟೇಶ್, ಚಂದ್ರಕಲಾ, ಅವುಕ ಶಿವಣ್ಣ, ಪೊಲೀಸ್ ಪೇದೆ ಮಂಜುನಾಥ ಇನ್ನಿತರ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಯೋಮಕೇಶ್‌ಗೌಡರು ಸ್ವಾಗತಿಸಿದರು. ದಿನೇಶ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here