ಹೊಸನಗರ: ಸಾಗರ – ಹೊಸನಗರ ಹೆದ್ದಾರಿಯ ಕೇಶವಪುರ ಸೇತುವೆ ಬಳಿಯ ತಿರುವಿನಲ್ಲಿ ಗೂಡ್ಸ್ ಆಟೋ ಹಾಗೂ ಮಾರುತಿ ಓಮ್ನಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಓಮ್ನಿ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಓಮ್ನಿಯಲ್ಲಿ ಚಾಲಕನೊಬ್ಬನೆ ಪ್ರಯಾಣ ಮಾಡುತ್ತಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಗೂಡ್ಸ್ ಆಟೋದಲ್ಲಿ ಇಬ್ಬರು ಪ್ರಯಾಣಿಸುತಿದ್ದು ಸಣ್ಣ-ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಇವರು ಹೊಸನಗರದಿಂದ ಬಟ್ಟೆಮಲಪ್ಪ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.