ಗೂಡ್ಸ್ ಆಟೋ ಹಾಗೂ ಓಮ್ನಿ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಚಾಲಕ ಸಾವು !

0
1589

ಹೊಸನಗರ: ಸಾಗರ – ಹೊಸನಗರ ಹೆದ್ದಾರಿಯ ಕೇಶವಪುರ ಸೇತುವೆ ಬಳಿಯ ತಿರುವಿನಲ್ಲಿ ಗೂಡ್ಸ್ ಆಟೋ ಹಾಗೂ ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದ ಸತೀಶ್ ಕಾಡವಳ್ಳಿ (52) ಸಾವನ್ನಪ್ಪಿದ್ದಾರೆ.

ಮೃತರು ತಾಲೂಕು ಕಾಂಗ್ರೆಸ್ ಸೇವಾದಳದ ಅಧ್ಯಕ್ಷರು ಹಾಗೂ ವೀರಶೈವ ಸಮುದಾಯದ ಮುಖಂಡರರಾಗಿಯೂ ಸಹ ಗುರುತಿಸಿಕೊಂಡಿದ್ದರು.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಓಮ್ನಿಯಲ್ಲಿ ಚಾಲಕನೊಬ್ಬನೆ ಪ್ರಯಾಣ ಮಾಡುತ್ತಿದುದ್ದರಿಂದ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ.

ಗೂಡ್ಸ್ ಆಟೋದಲ್ಲಿ ಇಬ್ಬರು ಪ್ರಯಾಣಿಸುತಿದ್ದು ಸಣ್ಣ-ಪುಟ್ಟ ಗಾಯವಾಗಿರುವ ವರದಿಯಾಗಿದ್ದು, ಹೊಸನಗರದಿಂದ ಬಟ್ಟೆಮಲಪ್ಪ ಕಡೆಗೆ ಪ್ರಯಾಣಿಸುತ್ತಿದ್ದರು.

ಸಂತಾಪ:

ಸತೀಶ್ ಕಾಡವಳ್ಳಿಯವರ ಅಕಾಲಿಕ ನಿಧನಕ್ಕೆ ಕೊಡಚಾದ್ರಿ ಜೆಸಿಐ ಸದಸ್ಯರು, ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ಸೂಚಿಸಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here