ಗೃಹಮಂತ್ರಿಗಳ ಸಾಮ್ರಾಜ್ಯದಲ್ಲಿ ಟೇಕ್ಅಪ್ ಆಗದ 108 ಆ್ಯಂಬುಲೆನ್ಸ್ ವಾಹನ..! ಗ್ರಾಮೀಣ ಭಾಗದ ಬಡ ರೋಗಿಗಳ ಸಂಕಷ್ಟ ಕೇಳುವರ್ಯಾರು?

0
610

ರಿಪ್ಪನ್‌ಪೇಟೆ : ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾದಂತಹ ಸಂಕಷ್ಟದ ಈ ಸಮಯದಲ್ಲಿ ಹೊಸನಗರ ತಾಲೂಕಿನ ಹುಂಚ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯ 108 ಆ್ಯಂಬುಲೆನ್ಸ್ ವಾಹನವು ಟೇಕ್ಅಪ್ ಆಗದೆ ಹೋದಲ್ಲಿ ಬಂದಲ್ಲಿ ಮಲಗಿಕೊಳ್ಳುತ್ತಿದೆ.

ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾ ಸ್ಥಳವಾದ ಹುಂಚ ಗ್ರಾಮದಲ್ಲಿರುವ ಸರ್ಕಾರಿ ಆರೋಗ್ಯ ಪ್ರಾಥಮಿಕ ಕೇಂದ್ರವು ಕಳೆದ 30 ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರವರ ಅಧಿಕಾರವಧಿಯಲ್ಲಿ ಆರಂಭಗೊಂಡಿದ್ದು ಇದುವರೆಗೆ ಹತ್ತಾರು ವೈದ್ಯರುಗಳು ಸಾವಿರಾರು ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡುವುದರ ಮೂಲಕ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಅತ್ಯುತ್ತಮ ಆಸ್ಪತ್ರೆಯೆಂದು ಕೀರ್ತಿ ಗಳಿಸಿತ್ತು. ಆದರೆ ಈಗಿನ ಚುನಾಯಿತ ಪ್ರತಿನಿಧಿಗಳ ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರಿಗೆ ಮತ್ತು ರೈತರುಗಳಿಗೆ ಉತ್ತಮ ಚಿಕಿತ್ಸೆ ದೊರೆಯದೆ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ.

ಕಳೆದ ಕೆಲವು ವಾರಗಳಿಂದ ಆಸ್ಪತ್ರೆಯು ಸೋರುತ್ತಿರುವ ಬಗ್ಗೆ ಹಾಗೂ ಅಲ್ಲಿನ ಸಿಬ್ಬಂದಿಗಳ ಬಗ್ಗೆ ‘ಮಲ್ನಾಡ್ ಟೈಮ್ಸ್’ ವರದಿಯನ್ನು ಪ್ರಕಟಿಸಿತ್ತು. ಆದರೂ ಎಚ್ಚೆತ್ತುಕೊಳ್ಳದ ಚುನಾಯಿತ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ 108 ಆ್ಯಂಬುಲೆನ್ಸ್ ವಾಹನವು ದುರಸ್ತಿಗೊಂಡಿದ್ದು. 10 ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಹುಂಚ ಹೋಬಳಿಯ ಬಿಲ್ಲೇಶ್ವರ, ಹುಂಚ, ಹೊಂಡಲಗದ್ದೆ, ಹೊಳೆಕೇವಿ, ಗರ್ತಿಕೆರೆ, ಶಿವಪುರ, ಬಿದರಹಳ್ಳಿ, ಕಲ್ಲುಕೊಪ್ಪ, ಕರಿಗೆರಸು, ಪಾಶೆಟ್ಟಿಕೊಪ್ಪ, ವಡಾಹೊಸಳ್ಳಿ, ಜೀರಿಗೆಮನೆ, ಜಂಬಳ್ಳಿ, ಕಡಸೂರು, ಕೂರಂಬಳ್ಳಿ, ಮಳಲಿಕೊಪ್ಪ, ನಾಗರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳು ಈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಏನಾದರೂ ಅವಘಡ ಸಂಭವಿಸಿ ತುರ್ತು ಚಿಕಿತ್ಸೆ ಬೇಕೆಂದರೆ 108 ವಾಹನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವರಿಗೆ ದೇವರೇ ಕಾಪಾಡಬೇಕು.

ಹೋದಲ್ಲಿ ಬಂದಲ್ಲಿ ನಿಲ್ಲುವ 108 ವಾಹನ ! :

ಏಳು ವರ್ಷಗಳ ಹಿಂದೆ ಹುಂಚ ಆಸ್ಪತ್ರೆಗೆ ಬಡಜನರ ತುರ್ತು ಸೇವೆಗಾಗಿ ಬಂದ 108 ಆ್ಯಂಬುಲೆನ್ಸ್ ವಾಹನ ಒಮ್ಮೆ ಮಕಾಡೆ ಮಲಗಿ ಬಿದ್ದಿತ್ತು. ರಿಪೇರಿ ಮಾಡಿಸಿದರು ರಿಪೇರಿಯಾಗದ ಈ ವಾಹನ ಹೋದಲ್ಲಿ-ಬಂದಲ್ಲಿ ನಿಲ್ಲುತ್ತದೆ. ಇದರಿಂದ ಬೇಸತ್ತ ನಾಗರಿಕರು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ‘ಮಲ್ನಾಡ್ ಟೈಮ್ಸ್’ ನೊಂದಿಗೆ ಮಾತನಾಡಿ ತುರ್ತು ಚಿಕಿತ್ಸಾ ಸಮಯದಲ್ಲಿ 108 ವಾಹನ ಅತ್ಯವಶ್ಯಕವಾಗಿತ್ತು ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ರಾಜ್ಯದ ಗೃಹ ಮಂತ್ರಿಗಳು ಮತ್ತು ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ರೀತಿ ಗಮನಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶಕ್ಕೆ ಪಡಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here