ಗೃಹ ಸಚಿವರ ಜಿಲ್ಲೆಯಲ್ಲೇ ಸದ್ದಿಲ್ಲದೇ ನಡೆಯುತ್ತಿದೆ ದನಗಳ ಕಳ್ಳತನ, ಸಾಗಾಣಿಕೆ !

0
1990

ಹೊಸನಗರ: ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುಮಾರು 1:30ರ ರಾತ್ರಿ ವಾಹನ ಸಂಖ್ಯೆ ಕೆಎ46 6301 ಸುತ್ತಾ ಗ್ರಾಮದ ನಿವಾಸಿ ದನ ಕಳ್ಳರಿಗೆ ಅವರ ಹಾಗೂ ಊರಿನ ದನಗಳನ್ನು ಕದ್ದು ತುಂಬಿ ಕಳುಹಿಸಿದ ಘಟನೆ ವರದಿಯಾಗಿದೆ.

ಅಲ್ಲಿನ ನಿವಾಸಿಗಳು ಸ್ಥಳಕ್ಕೆ ಹೋಗಿ ವಾಹನವನ್ನು ಅಡ್ಡಗಟ್ಟಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ದನಕಳ್ಳರು ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿದರು ಎಂದು ಹೇಳಲಾಗಿದ್ದು ತಕ್ಷಣ ಊರಿನವರು ಹೊಸನಗರದ ತಾಲ್ಲೂಕು ತಹಶೀಲ್ದಾರ್ ವಿ.ಎಸ್. ರಾಜೀವ್‌ರವರಿಗೆ ಫೋನ್ ಮೂಲಕ ಗಮನಕ್ಕೆ ತರಲಾಯಿತು.

ತಹಶೀಲ್ದಾರ್ ಜೀಪ್ ಚೇಸಿಂಗ್:

ಹೊಸನಗರದ ತಹಶೀಲ್ದಾರ್ ರಾಜೀವ್ ಹಾಗೂ ಜೀಪ್ ಡ್ರೈವರ್ ಗಣೇಶ್ ಹಾಗೂ ಜಯನಗರದ ಗ್ರಾಮಸ್ಥರು ಸುಮಾರು ದನ ತುಂಬಿದ ಗಾಡಿ ಶಿವಮೊಗ್ಗದ ಕಡೆಗೆ ಹೋಗುತ್ತಿರುವುದನ್ನು ಗಮನಿಸಿ ದನ ತುಂಬಿದ ವಾಹನದ ಹಿಂದೆ 30 ಕಿ.ಮೀ. ವರೆಗೆ ಚೇಸಿಂಗ್ ಮಾಡಿದ್ದು ಅವರ ಮೇಲೆಯು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸ್ ಇಲಾಖೆಗೆ ಮಾಹಿತಿ ವಿಫಲ:

ಹೊಸನಗರ ತಹಶೀಲ್ದಾರ್ ರಿಪ್ಪನ್‌ಪೇಟೆಯ ಕಡೆಗೆ ದನ ತುಂಬಿದ ವಾಹನ ಬರುತ್ತಿದೆ ತಕ್ಷಣ ಕಾರ್ಯಪ್ರವೃತ್ತರಾಗಿ ಎಂದು ರಿಪ್ಪನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದರೂ ವಾಹನ ಹಿಡಿಯುವಲ್ಲಿ ರಿಪ್ಪನ್‌ಪೇಟೆ ಪೋಲೀಸರು ವಿಫಲರಾಗಿದ್ದು ದೊಡ್ಡ ರಸ್ತೆಗೆ ಎರಡು ಬ್ಯಾರಿಕೇಡ್ ಮಾತ್ರ ಹಾಕಲಾಗಿದ್ದು ಅದರ ಬದಿಯಿಂದ ದನ ತುಂಬಿದ ವಾಹನ ಪಾಸ್ ಮಾಡಿದ್ದಾರೆ ಎನ್ನಲಾಗಿದೆ.

ಹೊಸನಗರ ತಾಲ್ಲೂಕಿನ ಜಯನಗರದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ದನ ಕಳ್ಳ ಸಾಗಣಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದ್ದು ತಕ್ಷಣ ಗೃಹ ಮಂತ್ರಿಗಳು ಹಾಗೂ ಶಾಸಕರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಜಯನಗರ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here