ಗೃಹ ಸಚಿವರ ತವರು ಕ್ಷೇತ್ರದಲ್ಲಿ ರೌಡಿಸಂ ! ರಸ್ತೆಗೆ ಹಾಕಿದ್ದ ಬೇಲಿ ವಿಚಾರವಾಗಿ ಮಾರಣಾಂತಿಕ ಹಲ್ಲೆ !!

0
930

ತೀರ್ಥಹಳ್ಳಿ: ಗೃಹ ಸಚಿವರ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರ ತೀರ್ಥಹಳ್ಳಿ ತಾಲೂಕಿನ ಮಲ್ಲೇಸರ ಗ್ರಾಮದಲ್ಲಿ ಹಳ್ಳಿಯ ರಸ್ತೆ ವಿಚಾರವಾಗಿ ಒಂದು ಗಲಾಟೆ ನಡೆದಿದೆ.

ಮುರಳೀಧರ್ ತನ್ನ ಚಿಕ್ಕಮ್ಮ ಪ್ರೇಮಾ ಮತ್ತು ಕುಟುಂಬಸ್ಥರ ನಡುವೆ ರಸ್ತೆಗೆ ಹಾಕಿರುವ ಬೇಲಿ ವಿಚಾರವಾಗಿ ಗಲಾಟೆ ಆಗಿತ್ತು. ನಿತ್ಯ ರಸ್ತೆಯಲ್ಲಿ ಓಡಾಡುವುದಕ್ಕೆ ಮುರಳಿಧರ್ ಮನೆ ಮತ್ತು ಜಮೀನಿಗೆ ಹೋಗುವುದಕ್ಕೆ ಸಮಸ್ಯೆ ಆಗುತ್ತಿತ್ತು. ಇದರಿಂದ ಪದೇ ಪದೇ ಮನಸ್ತಾಪ, ಜಗಳಗಳಾಗಿದ್ದವು. ಈ ಸಂಬಂಧ ಮುರಳಿಧರ್ ಗ್ರಾಮ ಪಂಚಾಯತಿ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಘಟನಾ ವಿವರ:

ಶಶಿಧರ್‌ ರವರಿಗೆ ಜ.09 ರಂದು ರಾತ್ರಿ 01-30 ರ ಸಮಯದಲ್ಲಿ ಅಭಿಷೇಕ್ ರವರು ಕರೆ ಮಾಡಿ ನಿಮ್ಮ ತಮ್ಮನಿಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದೇನೆ ಎಂದು ಹೇಳಿದ್ದು ಶಶಿಧರ್ ಮೆಗ್ಗಾನ್ ಆಸ್ಪತ್ರೆಗೆ ಬೆಳಿಗ್ಗೆ ಹೋಗಿ ತಮ್ಮನನ್ನು ವಿಚಾರಿಸಿದಾಗ ತಮ್ಮ ಮುರುಳೀಧರನಿಗೆ ತಲೆಯ ಮುಂಭಾಗ ಗಾಯವಾಗಿದ್ದು ಬಲಗೈ ಬ್ಯಾಂಡೇಜ್ ಹಾಕಿದ್ದು, ಮೈಕೈಗೆ ಅಲ್ಲಲ್ಲಿ ಗಾಯವಾಗಿದ್ದು ಶಶಿಧರ್ ಮುರುಳೀಧರನ್ನು ಏನಾಯ್ತು ? ಅಂತ ಕೇಳಿದ್ದಾರೆ. ಮುರುಳೀಧರನಿಗೆ ರಾತ್ರಿ 10-30 ರ ಸಮಯದಲ್ಲಿ ಪ್ರವೀಣ್ ಬಿನ್ ಯೋಗೀಶ್ ಆಚಾರಿ ಈತನು ನಿನ್ನ ಹತ್ತಿರ ಏನೋ ಮಾತಾಡಬೇಕು ಮನೆ ಹತ್ತಿರದ ಎಂಪಿಎಂ ಗುಡ್ಡಕ್ಕೆ ಬಾ ಎಂದು ಕರೆದಿದ್ದು, ಮುರುಳೀಧರನು ಅಲ್ಲಿಗೆ ಹೋದಾಗ ಪ್ರತಾಪ್, ಮನೋಜ್, ಪ್ರವೀಣ್, ಸಂಜಯ್, ಆದರ್ಶ ಈ 6 ಜನರಿದ್ದು ಮುರುಳೀಧರನು ಪ್ರವೀಣನಿಗೆ ಏನು ಬರಲು ಹೇಳಿದ್ದು? ಎಂದು ಕೇಳುತ್ತಿದಾಗ ಪ್ರತಾಪ್ ನು ಬೋ… ಮಗನೆ ಬೇಲಿ ವಿಚಾರದಲ್ಲಿ, ಪೊಲೀಸರಿಗೆ ಹಾಗೂ ಪಂಚಾಯ್ತಿಗೆ ದೂರು ನೀಡಿ ಪ್ರೇಮರವರ ಕುಟುಂಬಕ್ಕೆ ಪದೇ ಪದೇ ತೊಂದರೆ ಕೊಡುತ್ತೀಯಾ ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ಕೊಂಡಿದ್ದೀಯಾ ಇವತ್ತು ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂದು ಹೇಳಿ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಮುರಳೀಧರನ ತಲೆಗೆ ಹೊಡೆದಿದ್ದು ಪ್ರತಾಪ್, ಮನೋಜ್, ಪ್ರವೀಣ್, ಸಂಜಯ್, ಆದರ್ಶ ರವರೆಲ್ಲರೂ ತಮ್ಮ ತಮ್ಮ ಕೈಯಲ್ಲಿದ್ದ ದೊಣ್ಣೆಗಳಿಂದ ಮುರುಳೀಧರನಿಗೆ ಹೊಡೆಯುತ್ತಿರುವಾಗ ಅಭಿಷೇಕನು ಬಿಡಿಸಲು ಬಂದಿದ್ದು ಆತನಿಗೂ ಸಹ ಹೊಡೆದು ಮುರುಳೀಧರನ ಮೊಬೈಲ್ ಫೋನ್‌ನನ್ನು ನೆಲಕ್ಕೆ ಹೊಡೆದು ಬಿಸಾಡಿರುತ್ತಾರೆ.

ಈ ವಿಷಯವನ್ನು ಅಭೀಷೇಕನು ಅರುಣ ಮತ್ತು ಸುನೀಲ್ ರವರಿಗೆ ತಿಳಿಸಿದ್ದು, ಆಗ ಪ್ರತಾಪ್, ಮನೋಜ್, ಪ್ರವೀಣ್, ಸಂಜಯ್, ಆದರ್ಶ ರವರು ತಮ್ಮ ಕೈಯಲ್ಲಿ ದೊಣ್ಣೆಗಳನ್ನು ಬಿಸಾಡಿ ಹೋಗಿದ್ದು ಮುರುಳೀಧರನಿಗೆ ಪ್ರಜ್ಞೆ ತಪ್ಪಿ ಹೋಗಿದ್ದು, ಮುರುಳೀಧರನಿಗೆ ಹಾಗೂ ಚಿಕ್ಕಮ್ಮ ಪ್ರೇಮ ರವರಿಗೂ ರಸ್ತೆಗೆ ಹಾಕಿದ ಬೇರೆ ವಿಚಾರದಲ್ಲಿ ಕೊಲೆ ಮಾಡುವ ಉದ್ಧೇಶದಿಂದ ಮಾರಣಾಂತಿಕವಾಗಿ ಪ್ರತಾಪ್, ಮನೋಜ್, ಪ್ರವೀಣ್, ಸಂಜಯ್, ಆದರ್ಶ ರವರು ತಮ್ಮ ಮುರುಳೀಧರನಿಗೆ ಹಲ್ಲೆ ಮಾಡಿದ್ದು ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ತೀರ್ಥಹಳ್ಳಿ ಠಾಣೆಯಲ್ಲಿ ಶಶಿಧರ್ ರವರು ದೂರು ನೀಡಿದ್ದು ಇವರ ಮೇಲೆ ಎಫ್ಐಆರ್ ದಾಖಲಾಗಿದೆ.

ಗೃಹ ಸಚಿವರ ತವರು ಕ್ಷೇತ್ರದಲ್ಲೇ ಹೀಗೆ ಓಪನ್ ರೌಡಿಸಂ ನಡೆಯುತ್ತಿದೆ. ಇದು ಪೊಲೀಸರಿಗೆ ಕರ್ತವ್ಯದ ಮೇಲಿರುವ ಇಚ್ಛಾಶಕ್ತಿಯ ಕೊರತೆ ಎಂದು ಎದ್ದು ಕಾಣುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here