ಗೃಹ ಸಚಿವರ ನಿರಂತರ ಪ್ರಯತ್ನ ಆಗುಂಬೆ ಘಾಟಿ ಮರುಡಾಂಬರೀಕರಣಕ್ಕೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ

0
695

ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ 169ಎ ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ, ಮಣಿಪಾಲ, ಮಂಗಳೂರು ಸಂಪರ್ಕ ರಸ್ತೆ ಆಗುಂಬೆ ಘಾಟಿಯ ಸುಮಾರು 18.6 ಕಿ.ಮೀ. ಉದ್ದದ ರಸ್ತೆ ಮರು ಡಾಂಬರೀಕರಣಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರ ವಿಶೇಷ ಪ್ರಯತ್ನದಿಂದ ರಸ್ತೆ ದುರಸ್ತಿಗೆ ಸುಮಾರು 6.04 ಕೋಟಿ ರೂ. ಮಂಜೂರಾಗಿದ್ದು ಆಗುಂಬೆ ಘಾಟಿ ರಸ್ತೆ ಅನೇಕ ವರ್ಷಗಳಿಂದ ಅಲ್ಲಲ್ಲಿ ಹೊಂಡ ಬಿದ್ದು ಮಣಿಪಾಲ ಹೋಗುವ ದಾರಿಯಲ್ಲಿ ರೋಗಿಗಳಿಗೆ ತೊಂದರೆಯಗಿತ್ತು. ಈ ರಸ್ತೆ ತಾತ್ಕಾಲಿಕವಾಗಿ ರಸ್ತೆಯನ್ನು ರಿಪೇರಿ ಮಾಡಲಾಗುತ್ತಿತ್ತು ಈಗ ಮರು ಡಾಂಬರೀಕರಣಕ್ಕೆ ಸರ್ಕಾರ ಅನುದಾನ ಮಂಜೂರು ಮಾಡಿದ್ದು ಉಡುಪಿ-ಶಿವಮೊಗ್ಗ ಪ್ರಯಾಣಿಕರಿಗೆ ಇನ್ನೂ ಆಗುಂಬೆ ಘಾಟಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ಜಾಹಿರಾತು

LEAVE A REPLY

Please enter your comment!
Please enter your name here