ರಿಪ್ಪನ್ಪೇಟೆ: ಇಲ್ಲಿನ ಹುಂಚ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವಿದ್ಯುತ್ ಅವ್ಯವಸ್ಥೆ ಮತ್ತು ತುರ್ತು ಬ್ಯಾಟರಿ ಸೌಲಭ್ಯವಿಲ್ಲದೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಮೊಬೈಲ್ ಟಾರ್ಚ್ ಲೈಟೇ ಗತಿಯಾಗಿದೆ ಎಂದು ರೋಗಿಗಳು ತಮ್ಮ ಅಹವಾಲಯನ್ನು ಈ ರೀತಿ ಮಾಧ್ಯಮದವರಲ್ಲಿ ಹಂಚಿಕೊಂಡರು.

ರಾಜ್ಯದ ಗೃಹ ಸಚಿವರ ಸ್ವಕ್ಷೇತ್ರ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಳೆಗಾಳಿ ಗುಡುಗು ಸಿಡಿಲು ಬಂದರೆ ಸಾಕು ವಿದ್ಯುತ್ ಇರುವುದಿಲ್ಲ ತುರ್ತು
ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟರೆ ಬದಲಿ ವ್ಯವಸ್ಥೆಗೆಂದು ಅಳವಡಿಸಲಾದ ಚಾರ್ಜರ್ ಬ್ಯಾಟರಿ ಸಹ ಕೆಟ್ಟು ಬಿಳಿ ಆನೆಯಂತಾಗಿದ್ದರೂ ಕೂಡಾ ಕೇಳರಿಲ್ಲದಂತಾಗಿದೆ ಎಂದು ಹೇಳಲಾಗುತ್ತದೆ.
ಕಳೆದ ಒಂದು ವಾರದಿಂದ ಮಲೆನಾಡಿನ ವ್ಯಾಪ್ತಿಯಲ್ಲಿ ಭಾರಿ ಗಾಳಿ ಗುಡುಗು ಸಿಡಿಲು ಮಳೆಯ ಆರ್ಭಟದಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೆ ಹಲವು ಕಡೆಯಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ಅವ್ಯವಸ್ಥೆಯಾಗಿದ್ದು ಬದಲಿ ವ್ಯವಸ್ಥೆಯ ಜನರೇಟರ್ ಸಹ ಕೆಟ್ಟು ಹೋಗಿ ರೋಗಿಗಳು ಪಡದಾಡುವಮತಾಗಿದೆ.
ಕಾಯಿಲೆ ಯಾವಾಗ ? ಎಷ್ಟು ಹೊತ್ತಿಗೆ ಬರುತ್ತದೋ ? ಅಥವಾ ವಾಹನ ಅಪಘಾತಗಳು ಸಂಭಂವಿಸಿದರೆ ತುರ್ತು ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕತ್ತಲೆಯಲ್ಲಿ
ತುರ್ತು ಚಿಕಿತ್ಸೆ ನೀಡುವುದಾದರು ಹೇಗೆ ಸ್ವಾಮಿ ? ಎಂದು ಶುಶ್ರೂಷಕಿಯರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಅಲ್ಲದೇ ಇತ್ತೀಚೆಗೆ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಸೋಲಾರ್ ದೀಪವನ್ನು ಅಳವಡಿಸಲಾದರೂ ಅದು ಕೂಡಾ ನಾಮಕಾವಸ್ಥೆಗೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ದಾದಿಯರು ಕರೆಂಟ್ ಇಲ್ಲದೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಮೊಬೈಲ್ ಬೆಳಕಿನಲ್ಲಿ ಚಿಕಿತ್ಸೆ ನೀಡುವುದು ಅನಿರ್ವಾಯವಾಗಿದೆ.
