ಗೋ ಸೇವೆ ಮತ್ತು ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮೊದಲು ಮಾಡಿದವರು ರಾಘವೇಶ್ವರ ಶ್ರೀಗಳು ; ಸಂಸದ ಬಿ.ವೈ ರಾಘವೇಂದ್ರ

0
521

ಹೊಸನಗರ: ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಯವರ ನೇತೃತ್ವದಲ್ಲಿ ಗೋ ಸೇವೆ ಜಾಗೃತಿ ಮತ್ತು ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮಾಡಿರುವ ಫಲವಾಗಿಯೇ ಇಂದು ನಮ್ಮ ಸರ್ಕಾರ ಗೋರಕ್ಷಣೆ ಕಾಯ್ದೆ ಜಾರಿಗೆ ತಂದು ಗೋವುಗಳನ್ನು ಉಳಿಸಲು ಕಾರಣವಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರರವರು ಹೇಳಿದರು.

ರಾಮಚಂದ್ರಪುರ ಮಠದ ಶ್ರೀ ಚಂದ್ರಮೌಳೇಶ್ವರ ದೇವಾಲಯದ ಶ್ರೀ ದೇವರ ಧ್ವಜಸ್ತಂಭ ಪ್ರತಿಷ್ಠಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ಈ ಪುಣ್ಯ ಕ್ಷೇತ್ರದಲ್ಲಿ ಅತ್ಯಂತ ಸುಂದರವಾಗಿ ವಾಸ್ತು ಶಿಲ್ಪದ ಮೂಲಕ ನಿರ್ಮಾಣವಾಗಿರುವ ಶ್ರೀಚಂದ್ರಮೌಳೇಶ್ವರ ದೇವರ ಭವ್ಯ ದೇವಾಲಯ ನಿರ್ಮಾಣವಾಗಿ ಇಂದು ಧ್ವಜಸ್ತಂಭ ಪ್ರತಿಷ್ಠಾಪನ ಕಾರ್ಯನೆರವೇರಿದೆ ಮುಂದಿನ ದಿನದಲ್ಲಿ ಸುಕ್ಷೇತ್ರವಾಗಿ ಹೊರಹೊಮ್ಮಲಿದೆ. ಇಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಕಲ್ಪಿಸಿದ ಇಲ್ಲಿನ ಜನತೆ ಮತ್ತು ಶ್ರೀಗಳಿಗೆ ನನ್ನ ನಮನಗಳು ಎಂದರು.

ಈ ಧ್ವಜಸ್ತಂಭ ಪ್ರತಿಷ್ಠಾಪನೆಯಲ್ಲಿ ಹೊರನಾಡು ಕ್ಷೇತ್ರದ ಧರ್ಮದರ್ಶಿಗಳಾದ ಡಾ|| ಭೀಮೇಶ್ವರ ಜೋಶಿ, ಶಾಸಕರಾದ ಹರತಾಳು ಹಾಲಪ್ಪ, ಸಿಗಂದೂರು ಪ್ರಧಾನ ಅರ್ಚಕರಾದ ಶೇಷಗಿರಿಭಟ್, ಹಟ್ಟಿ ಅಂಗಡಿಯ ಪ್ರಧಾನ ಅರ್ಚಕರಾದ ಬಾಲಚಂದ್ರಭಟ್ ಮಲೆನಾಡು ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ ಹೆಗಡೆ, ಪ್ರಭಾಕರ್, ಶ್ರೀಧರ ಉಡುಪ, ಹನಿಯಾ ರವಿ, ವಿಷ್ಣು ಕುಚುಕಾಡು, ಎನ್.ಆರ್ ದೇವಾನಂದ್, ಗಣಪತಿ ಬಿಳಗೋಡು, ಪ್ರಸನ್ನ ಭಟ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here