ಗ್ರಾಪಂ ಕಚೇರಿ ಪಕ್ಕದಲ್ಲೇ ರಾಜ್ಯ ಹೆದ್ದಾರಿಯಲ್ಲಿ ಅಪಾಯವನ್ನು ಆಹ್ವಾನಿಸುವ ಕಂದಕ !

0
752

ಹೊಸನಗರ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲೇ ಕಣ್ಣಳತೆ ದೂರದಲ್ಲಿರುವ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಕರಿನಗೊಳ್ಳಿ ಹಾಗೂ ಎಂ ಗುಡ್ಡೆಕೊಪ್ಪ ಕಡೆಗಳಿಂದ ಬರುವ ನೀರಿನ ರಭಸಕ್ಕೆ ಸುಮಾರು ಹತ್ತು ಅಡಿಗೂ ಹೆಚ್ಚು ಆಳದ ಕಂದಕ ಸೃಷ್ಟಿಯಾಗಿದ್ದು ಈ ಸ್ಥಳ ಅಪಾಯವನ್ನು ಆಹ್ವಾನಿಸುಸುತ್ತಿದ್ದು ಪಕ್ಕದಲ್ಲೇ ಗ್ರಾಮ ಪಂಚಾಯಿತಿ ಕಚೇರಿ ಇದ್ದರು ಈ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯದಿಂದಿರುವುದು ಕಂಡುಬಂದಿದೆ.

ಹೊನ್ನಾಳಿ – ಬೈಂದೂರ ರಾಜ್ಯ ಹೆದ್ದಾರಿಯಾದ ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳ ಸಂಚಾರ ನಡೆಸುತ್ತಿದ್ದು ಈ ಜಾಗದಲ್ಲಿ ಯಾವುದೇ ತಡೆಗೋಡೆ ನಿರ್ಮಿಸುವ ಗೋಜಿಗೆ ಹೋಗದೆ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ಹೊಂದಿರುವ ಬಗ್ಗೆ ಆ ಭಾಗದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಮಾಧ್ಯಮದ ಮೊರೆ ಹೋಗಿದ್ದಾರೆ.

ಗ್ರಾಮ ಪಂಚಾಯಿತಿಯವರು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಕಾರ್ಯ ಬಿಟ್ಟು ತತ್ತಕ್ಷಣ ತಡೆಗೋಡೆ ನಿರ್ಮಿಸುವ ಕಾರ್ಯ ಕೈಗೊಳ್ಳುವ ಮೂಲಕ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here