ಗ್ರಾಮಠಾಣಾ ರಸ್ತೆಗೆ ಗೇಟ್ ನಿರ್ಮಾಣ ! ಜನರು ಓಡಾಡದಂತೆ ಬೀಗ ಹಾಕಿದ ಭೂ ಮಾಲೀಕ !! ಗೇಟ್ ತೆರವುಗೊಳಿಸಿ ರೈತರು ಓಡಾಡಲು ಅನುವು ಮಾಡಿಕೊಡುವಂತೆ ಹೊಸಹಳ್ಳಿ ರೈತರಿಂದ ಗ್ರಾಮಾಡಳಿತಕ್ಕೆ ಒತ್ತಾಯ

0
697

ರಿಪ್ಪನ್‌ಪೇಟೆ: ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಭೂ ಮಾಲೀಕನೊಬ್ಬ ಸಾರ್ವಜನಿಕರು ಓಡಾಡುವ ಗ್ರಾಮಠಾಣಾ ರಸ್ತೆಗೆ ಗೇಟ್ ನಿರ್ಮಾಣ ಮಾಡಿ ಬೀಗ ಹಾಕಿ ರೈತರು ತಮ್ಮ ಹೊಲ-ಗದ್ದೆಗಳಿಗೆ ಓಡಾಡದಂತೆ ಮಾಡಿರುವ ಘಟನೆ ನಡೆದಿದೆ.

ಶಾಂತಪುರ ಮತ್ತು ಕೇಶವಾಪುರ ನಡುವಿನ ಹೊಸಹಳ್ಳಿ ಗ್ರಾಮದ ರೈತ ಕುಟುಂಬಗಳು ತಮ್ಮ ಹೊಲಗಳಿಗೆ ಹೋಗಲು ಕಳೆದ ಕೆಲವು ದಶಕಗಳಿಂದಲೂ ಗ್ರಾಮಠಾಣಾ ರಸ್ತೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಹೊಸಹಳ್ಳಿಯ ಭೂಮಾಲೀಕನೊಬ್ಬ ಗ್ರಾಮ ಠಾಣಾ ರಸ್ತೆಗೆ ಗೇಟ್ ನಿರ್ಮಾಣ ಮಾಡಿ ಬೀಗ ಹಾಕಿ ರೈತರುಗಳು ತಮ್ಮ ಹೊಲ-ಗದ್ದೆಗಳಿಗೆ ಹೋಗದಂತೆ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ಮಾಧ್ಯಮದವರಲ್ಲಿ ತೋಡಿಕೊಂಡಿದ್ದಾರೆ.

ಚಿಕ್ಕಜೇನಿ ಗ್ರಾಮ ಪಂಚಾಯಿತಿಯ ಅನುದಾನದಿಂದ ರೈತರುಗಳು ತಮ್ಮ ಹೊಲ-ಗದ್ದೆಗಳಿಗೆ ಓಡಾಡಲು ಹಾಗೂ ರೈತ ಪರಿಕರಗಳನ್ನು ತಮ್ಮ ಹೊಲ-ಗದ್ದೆಗಳಿಗೆ ಸಾಗಿಸಲು ಕಳೆದ ಕೆಲವು ದಶಕಗಳ ಹಿಂದೆ ರಸ್ತೆ ನಿರ್ಮಾಣ ಮಾಡಿ ಕೊಟ್ಟಿದ್ದರು. ಆದರೆ ಈಗ ಅದೇ ರಸ್ತೆಯಲ್ಲಿ ಭೂಮಾಲಿಕನೊಬ್ಬ ಕಬ್ಬಿಣದ ಗೇಟ್‌ ನಿರ್ಮಾಣ ಮಾಡಿ ಬೀಗ ಹಾಕಿ ರೈತರುಗಳು ತಮ್ಮ ಹೊಲಗಳಿಗೆ ಹೋಗದಂತೆ ತಡೆದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಮತ್ತು ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಭೂಮಾಲಿಕನೊಬ್ಬ ಕಬ್ಬಿಣದ ಗೇಟ್ ನಿರ್ಮಾಣ ಮಾಡಿ ಬೀಗ ಹಾಕಿ ಓಡಾಡದಂತೆ ಮಾಡಿರುವ ಬಗ್ಗೆ ಈಗಾಗಲೇ ಗ್ರಾಮಾಡಳಿತಕ್ಕೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಸಹ ಮಾಲೀಕನ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ.

ರೈತರುಗಳು ಓಡಾಡುವ ಗ್ರಾಮಠಾಣಾ ರಸ್ತೆಗೆ ಗೇಟ್ ಮಾಡಿ ಬೀಗ ಹಾಕಿರುವುದನ್ನು ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೊಸಹಳ್ಳಿ ರೈತ ರವಿ ತಮ್ಮ ಅಳಲನ್ನು ಮಾಧ್ಯಮಗಳ ಎದುರಿಗೆ ತೋಡಿಕೊಂಡಿದ್ದಾರೆ.

ಈಗಾಗಲೇ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಠಾಣಾ ರಸ್ತೆಗೆ ಗೇಟ್ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಲು ಸೂಚಿಸಿದ್ದರು ಸಹ ಗ್ರಾಮಾಡಳಿತ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನಾದರೂ ಗ್ರಾಮಾಡಳಿತ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಗ್ರಾಮಠಾಣಾ ರಸ್ತೆಗೆ ಕಬ್ಬಿಣದ ಗೇಟನ್ನು ನಿರ್ಮಾಣ ಮಾಡಿ ಬೀಗ ಹಾಕುವುದನ್ನು ತೆರವುಗೊಳಿಸುತ್ತಾರಾ ಎಂದು ಕಾದು ನೋಡಬೇಕು.

ಜಾಹಿರಾತು

LEAVE A REPLY

Please enter your comment!
Please enter your name here