ರಿಪ್ಪನ್ಪೇಟೆ: ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆಗೆ ಹೆಚ್ಚು ಆಸಕ್ತರಾಗುವವರೇ ಹೆಚ್ಚು. ಆದರೆ, ಸರ್ಕಾರಿ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಲ್ಲಿನ ಮಕ್ಕಳಿಗೆ ಶೈಕ್ಷಣಿಕವಾಗಿ ಹಿಂದುಳಿಯದೇ ಇಲ್ಲಿ ಶಾಲಾ ಶಿಕ್ಷಕಿ ದೀಪಾ ತಮ್ಮ ವಿಶೇಷ ಆಸಕ್ತಯಿಂದಾಗಿ ಕಳೆದ ಹದಿನಾಲ್ಕು ವರ್ಷಗಳ ಕಾಲ ಖಾಸಗಿ ಶಾಲೆಗೆ ಮಕ್ಕಳನ್ನು ದಾಖಲಿಸದಂತೆ ಪೋಷಕರ ಮತ್ತು ಮಕ್ಕಳ ಮನವೊಲಿಸುವುದರೊಂದಿಗೆ ಶಾಲೆಯನ್ನು ಮಾದರಿಯನ್ನಾಗಿಸಿದ್ದಾರೆಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಸತೀಶ್ ಕೊಡಸೆ ಹೇಳಿದರು.
ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿಣಸೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿ ಬೇರೆ ಕಡೆಗೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ವರ್ಗಾವಣೆಗೊಂಡ ಶಿಕ್ಷಕಿ ದೀಪಾ ನಾಯ್ಕ್ ಇವರನ್ನು ಶಾಲಾಭಿವೃದ್ದಿ ಸಮಿತಿ ಮತ್ತು ಗ್ರಾಮಸ್ಥರು ಬೀಳ್ಕೊಡುಗೆಯೊಂದಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ದಿವಾಕರ್ ಮಾತನಾಡಿ, ವಿದ್ಯೆ ಕಲಿಸಿದ ಗುರುವನ್ನು ಹಾಗೂ ತಂದೆ ತಾಯಿಯರನ್ನು ಗೌರವಾದರದೊಂದಿಗೆ ಕಾಣುವುದು ಮೊದಲ ಆದ್ಯತೆಯಾಗಿದೆ. ಮುಂದೆ ಗುರಿ ಹಿಂದೆ ಗುರು ಇದ್ದರೆ ಜೀವನಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನಮ್ಮೂರಿನ ಶಿಕ್ಷಕಿ ದೀಪಾ ಸಾಕ್ಷಿಯಾಗಿದ್ದಾರೆಂದರು.
ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷರಾದ ಆಶೋಕ ಕೆ.ರಮೇಶ್ ಜಿ.ಡಿ.ನೇಂದ್ರಪ್ಪ, ಶಾಲಾಭಿವೃದ್ದಿ ಸಮಿತಿಯ ಸದಸ್ಯರುಗಳು ಗ್ರಾಮಸ್ಥರು ಹಾಜರಿದ್ದರು.
ಸಿ.ಆರ್.ಪಿ.ಯಾಗಿ ಬಡ್ತಿ ಹೊಂದಿ ಬೇರೆ ಕಡೆಗೆ ವರ್ಗಾವಣೆಗೊಂಡ ಶಿಕ್ಷಕಿ ದೀಪಾ ನಾಯ್ಕ್ ಇವರನ್ನು ಗ್ರಾಮಸ್ಥರು ಮತ್ತು ಶಾಲಾಭಿವೃದ್ದಿ ಸಮಿತಿಯವರು ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಟ್ಟರು.
ವೀನಾ ಪ್ರಾರ್ಥಿಸಿದರು. ರಾಜು ಸ್ವಾಗತಿಸಿ, ರೀತಾ ನಿರೂಪಿಸಿದರು. ನಟರಾಜ ವಂದಿಸಿದರು.
Related