ಹೊಸನಗರ: ಬಡ ಗ್ರಾಮೀಣ ಮಕ್ಕಳಿಗೂ ಸಹ ಆಧುನಿಕತೆಯ ಆನ್ಲೈನ್ ಶಿಕ್ಷಣ ದೊರಕಬೇಕು ಹಾಗೂ ಆಧುನಿಕ ತಂತ್ರಜ್ಞಾನದ ಮಾಹಿತಿಗಳ ಆವಿಷ್ಕಾರವಾಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ, ಸಂಘಟಿತರಾಗಿ ಶಿಥಿಲಾವಸ್ಥೆಯ ಶಾಲೆಯ ಕಟ್ಟಡದ ಕೊಠಡಿಗೆ ಅಂದಾಜು 2 ಲಕ್ಷ ರೂ. ದೇಣಿಗೆ ಮೂಲಕ ಸಂಗ್ರಹಿಸಿ ಆಧುನಿಕತೆಯ ರೂಪ ನೀಡಿ ವಿವಿಧೋದ್ದೇಶ ಸೌಲಭ್ಯ ಒಳಗೊಂಡ ಸ್ಮಾರ್ಟ್ ಕ್ಲಾಸ್ ರಚಿಸುವ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಓಂಕಾರ ಹಾಡಿದರು.
ಜಯನಗರದ ಹಳೆವಿದ್ಯಾರ್ಥಿ ಸಂಘದವರು ಯುವ ಮುಖಂಡ ಜೆ.ಆರ್ ಗೋಪಿನಾಥ್ ನೇತೃತ್ವದಲ್ಲಿ ಒಗ್ಗೂಡಿ, ಕಳೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ನ ಅಧ್ಯಕ್ಷ ವಿನಯಕುಮಾರ್ ಡಿ.ಆರ್. ಹಾಗೂ ಮೇಲಿನ ಬೆಸಿಗೆ ಗ್ರಾಮಪಂಚಾಯತಿ ಅಧ್ಯಕ್ಷೆ ಜ್ಯೋತಿ ನಾಗರಾಜರವರು ಮತ್ತಿತರರು ಸ್ಮಾರ್ಟ್ ಕ್ಲಾಸ್ ನಿರ್ಮಾಣದ ದಾನಿಗಳಾಗಿದ್ದು ಅವರುಗಳೆದುರೆ ಸ್ಮಾರ್ಟ್ ಕ್ಲಾಸ್ ಕೊಠಡಿ ದಾನಿಗಳ ನಾಮಫಲಕವನ್ನು ಶಾಲಾ ಆಡಳಿತ ಮಂಡಳಿಯವರು ಅನಾವರಣಗೊಳಿಸಿದರು.
ಸಣ್ಣ ಮಕ್ಕಳಿಗೆ ಪೋಷಕರು ಹೆಚ್ಚು ಮಾತನಾಡುವ ಹವ್ಯಾಸ ಬೆಳೆಸಬೇಕೆಂದರು ಸ್ಮಾರ್ಟ್ ಕ್ಲಾಸ್ ನಿಂದ ಸಚಿತ್ರ ವಿವರದ ಶಿಕ್ಷಣ ಲಭ್ಯವಾಗುವುದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಲಭ್ಯವಾಗಲಿದೆ ಎಂದು ತಿಳಿಸಿ ಕೇವಲ ಪರೀಕ್ಷೆ ಎದುರಿಸುವುದು ಮಾತ್ರ ಕಲಿಕೆಯಲ್ಲ ಎಂಬ ಕಟು ಸತ್ಯವನ್ನು ತಿಳಿಸಿ ಶಾಲೆಗೆ ನೀಡಿದ ದಾನ ಬೆಲೆಕಟ್ಟಲಾಗದ ಅಮೂಲ್ಯ ವಸ್ತು ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್, ಗಣಪತಿ ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ತಾಲೂಕು ಆಡಳಿತದ ಶಿರಸ್ತೆದಾರ್ ಸುರೇಶ್, ಅಕ್ಷರ ದಾಸೋಹ ಕಾರ್ಯಕ್ರಮದ ಮೇಲ್ವಿಚಾರಕ ನಾಗರಾಜ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆ ಆರ್ ಗೋಪಿನಾಥ್, ಸಿಆರ್ಪಿ ವೆಂಕಟೇಶ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಗಣೇಶ ಭಂಡಾರಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಪಿ. ಶಾರದಮ್ಮ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಶಿಕ್ಷಣ ವ್ಯವಸ್ಥೆ ಈ ಹಿಂದಿಗಿಂತಲೂ ವಿಭಿನ್ನವಾಗಿದೆ ಈಗ ಶಿಕ್ಷಣ ಇಲಾಖೆ ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ಸಂವಹನದಿಂದ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ ಶಿಕ್ಷಣದ ಅಭಿವೃದ್ಧಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಈ ನಿಟ್ಟಿನಲ್ಲಿ ಪೋಷಕರು ವಿಶ್ವಾಸವನ್ನು ಹೊಂದಬೇಕೆಂದರು.
ಶಿಕ್ಷಕಿ ಸುಲೋಚನ ಸ್ವಾಗತಿಸಿದರು. ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಧರ್ಮಪ್ಪ ವಂದಿಸಿದರು.