ಹಿಂದೂಗಳ ಮನೆ ಮೇಲೆ ಕಲ್ಲೆಸೆದು ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ

0 187

ಶಿವಮೊಗ್ಗ: ರಾಗಿಗುಡ್ಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಗಳ ಮನೆ ಮೇಲೆ ಕಲ್ಲೆಸೆದು ಮಾರಣಾಂತಿಕ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಬಂಧಿಸಬೇಕು. ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.


ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಅಖಂಡ ಭಾರತದ ಚಿತ್ರದಲ್ಲಿ ಔರಂಗಜೇಬನ, ಟಿಪ್ಪುಸುಲ್ತಾನ್ ಚಿತ್ರದ ಪರಿಕಲ್ಪನೆಯ ಟೂಲ್‌ಕಿಟ್ ಸಿದ್ಧಪಡಿಸಲಾಗಿದೆ. ಏಕಾಏಕಿ ಹಿಂದೂ ಬಾಂಧವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮುಸ್ಲಿಂ ಯುವಕರು ಮೆರವಣಿಗೆಯ ಉದ್ದಕ್ಕೂ ಕತ್ತಿಗಳನ್ನು ಪ್ರದರ್ಶಿಸಿದ್ದಾರೆ. ಹಿಂಸೆಯನ್ನು ಪ್ರಚೋದಿಸಿದ್ದಾರೆ. ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವಂತೆ ಪ್ರದರ್ಶನ ಮಾಡಿದ್ದಾರೆ ಎಂದು ದೂರಿದರು.


ನಗರದಲ್ಲಿ ಶಾಂತಿಯನ್ನು ಹಾಳು ಮಾಡಲು ಕೆಲವು ಮುಸ್ಲಿಂ ಸಂಘಟನೆಗಳ ಪೂರ್ವ ಯೋಜಿತ ಕೃತ್ಯವಾಗಿದೆ. ಪಿಎಫ್‌ಐ ಕಾರ್ಯಕರ್ತರು ಇದರಲ್ಲಿ ನೇರ ಭಾಗಿಯಾಗಿದ್ದಾರೆಂಬ ಅನುಮಾನವಿದೆ. ಅದ್ದರಿಂದ ಇಂತಹ ವ್ಯಕ್ತಿಗಳನ್ನು ಗುರುತಿಸಿ ಬಂಧಿಸಬೇಕು. ರಾಗಿಗುಡ್ಡದಲ್ಲಿ ಹಿಂದೂ ಬಾಂಧವರಿಗೆ ರಕ್ಷಣೆ ನೀಡಬೇಕು ಮತ್ತು ಅಮಾಯಕ ಹಿಂದೂಗಳ ಮೇಲೆ ಹಾಕಿರುವ ಮೊಕದ್ದಮೆಗಳನ್ನು ರದ್ದುಪಡಿಸಬೇಕು. ಘಟನೆಯಲ್ಲಿ ಹಾನಿಯಾದ ಹಿಂದೂಗಳ ಮನೆಗಳಿಗೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ್, ಕಾರ್ಯದರ್ಶಿ ನಾರಾಯಣ ಜಿ. ವರ್ಣೇಕರ್, ಬಜರಂಗದಳದ ವಡಿವೇಲು ರಾಘವನ್, ರಾಜೇಶ್ ಗೌಡ, ನಟರಾಜ್ ಭಾಗವತ್, ರಮೇಶ್ ಬಾಬು, ರಾಜು, ರಮೇಶ್ ಪರಿಸರ, ನಟರಾಜ್ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!