24.3 C
Shimoga
Friday, December 9, 2022

ಗ್ರಾಹಕರಿಲ್ಲದೆ ಬಣಗುಡುತ್ತಿರುವ ಹೂವು, ಹಣ್ಣು ಮಾರುಕಟ್ಟೆ

ಶಿಕಾರಿಪುರ : ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಹೂವು ಹಣ್ಣು ತರಕಾರಿಗಳ ಖರೀದಿದಾರರಿಲ್ಲದೆ, ಸಾರ್ವಜನಿಕರ ಸಂಚಾರವಿಲ್ಲದೆ ರಸ್ತೆ ಬಣಗುಡುತ್ತಿದೆ.

ಹೌದು ನಾಡಿನ ಹಬ್ಬವೆಂದು ಆಚರಿಸುವ ದಸರಾ ಹಬ್ಬ ಮುಗಿದು ಮೂರ್ನಾಲ್ಕು ದಿನಗಳಲ್ಲಿ ಭೂಮಿಯನ್ನು ಪೂಜಿಸುವ ಭೂಮಿ(ಸೀಗೆ) ಹುಣ್ಣಿಮೆ ನಡೆಸಿದ ಜನತೆ, ಈಗ ದೇಶದ ಪ್ರಮುಖ ಹಬ್ಬಗಳಲೊಂದಾದ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ಭರದಿಂದ ಸಾಗುತ್ತಿದೆ. ಶನಿವಾರದಂದು ಒಂದೆಡೆ ರೈತರು ತಮ್ಮ ದನಕರುಗಳಿಗೆ ಈ ಹಬ್ಬದಂದು ಸಿಂಗರಿಸಲು ಬೇಕಾದ ಬಣ್ಣ, ದಂಡೆ, ಮೂಗುದಾರ ಒಣಕೊಬ್ಬರಿಗಳ ಖರೀದಿ ಭರದಿಂದ ಸಾಗಿತ್ತು. ಆದರೆ ಶನಿವಾರದಂದೇ ಕೆಲ ವರ್ತಕರು ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಗೆ ಚಿನ್ನದ ಅಂಗಡಿ, ದಿನಸಿ ಅಂಗಡಿ, ಔಷಧಿ ಅಂಗಡಿ ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುಗಳ ವರ್ತಕರು ಹೂವಿನ ಅಲಂಕಾರಕ್ಕಾಗಿ ಚೆಂಡು ಹೂವನ್ನು ಖರೀದಿಸಬಹುದು ಎಂದು ರಾಶಿ ರಾಶಿ ಚೆಂಡು ಹೂವು, ಬೂದುಗುಂಬಳ ಕಾಯಿ ತಂದು ರಸ್ತೆ ಪಕ್ಕದಲ್ಲಿ ಹೂಡಿಕೆ ಮಾಡಿ ಕಾಣುತ್ತಿದ್ದರೂ ಇವುಗಳನ್ನು ಖರೀದಿಸಲು ಗ್ರಾಹಕರಿಲ್ಲದೇ ಬಣಗುಡು ಸ್ಥಿತಿ ನಿರ್ಮಾಣವಾಗಿದೆ.

ಕಳೆದ 20 ದಿನಗಳ ಹಿಂದೆ ದಸರಾ ಹಬ್ಬವನ್ನು ಅದ್ದೂರಿಯಾಗಿ ನಡೆಸಿದ ಜನತೆ ಈಗ ಮತ್ತೆ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೋಮವಾರ ಅಮಾವಾಸ್ಯೆಯ ವರ್ತಕರಾಗಲೀ, ಗ್ರಾಹಕರಾಗಿಲೀ ಹಬ್ಬದ ಪ್ರಯುಕ್ತ ಚೆಂಡು ಹೂವು ಬೂದುಗುಂಬಳ ಕಾಯಿ ಅತಿ ಹೆಚ್ಚು ಖರೀದಿಸಬಹುದು ಎಂದು ನಿರೀಕ್ಷಿಸಿದ್ದ ಈ ವ್ಯಾಪಾರಸ್ಥರು, ಅಮಾವಾಸ್ಯೆಯ ಮರುದಿನ ಅಂದರೆ ಮಂಗಳವಾರ ಗ್ರಹಣವಿರುವ ಕಾರಣ ಇವುಗಳ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆಯೇ ಎಂಬಂತೆ ರಸ್ತೆ ಪಕ್ಕದಲ್ಲಿ ಕುಳಿತು ವ್ಯಾಪಾರ ವಹಿವಾಟು ನಡೆಸುವವರು ಖರೀದಿದಾರರಿಗಾಗಿ ಬುಧುವಾರದವರಗೆ ಕಾಯುತ್ತಾ ಕೂರುವುದು ಅನಿವಾರ್ಯವಾಗಿದೆ ಎಂಬಂತಾಗಿದೆ. 

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!