ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ಸನ್ನಿಧಿಯಲ್ಲಿ ಜರುಗಿದ ಪಲ್ಲಕ್ಕಿ ಉತ್ಸವ ಮೆರವಣಿಗೆ

0
688

ಸೊರಬ: ನಾಡಹಬ್ಬ ವಿಜಯದಶಮಿಯನ್ನು ಜನತೆ ಸಂಭ್ರಮ ಸಡಗರದಿಂದ ಆಚರಿಸಿದ್ದು, ಇಲ್ಲಿನ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಶ್ರೀ ಕ್ಷೇತ್ರ ಚಂದ್ರಗುತ್ತಿಯ ಶ್ರೀ ರೇಣುಕಾಂಬ ಭಕ್ತಾದಿಗಳು ದೇವಿಗೆ ಸಾವಿರಾರು ಪಾಲ್ಗೊಂಡಿದ್ದರು.

ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಹಾಗೂ ಸುಂದರವಾಗಿ ಅಲಂಕೃತಗೊಂಡ ಟ್ರ್ಯಾಕ್ಟರ್ ಮೇಲೆ ದೇವಿಯ ಭಾವಚಿತ್ರ ಇಟ್ಟು ಡೊಳ್ಳು ಕುಣಿತ, ಕೋಲಾಟದ ಮೂಲಕ ನ್ಯಾರ್ಶಿ ಗ್ರಾಮದ ಬನ್ನಿ ಕಟ್ಟೆಯಿಂದ ನಾಲ್ಕು ಕಾಲು ಮಂಟಪದವರೆಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಬಯಲು ಸೀಮೆಯ ನೂರಾರು ಭಕ್ತರು ದಿವಟಿಗೆಯನ್ನು ಹಿಡಿದು ದೇವಿಯ ಕೃಪೆಗೆ ಪಾತ್ರರಾದರು.

ಬನ್ನಿ ಉತ್ಸವಕ್ಕೆ ಉಪ ವಿಭಾಗಾಧಿಕಾರಿಗಳಾದ ಎಲ್ ನಾಗರಾಜ್, ತಹಶೀಲ್ದಾರರಾದ ಶಿವಾನಂದ ಪಿ ರಾಣೆ, ಉಪ ತಹಶೀಲ್ದಾರರಾದ ವೆಂಕಟೇಶ್, ಕಾರ್ಯ ನಿರ್ವಹಣಾಧಿಕಾರಿ ಎನ್ ಆರ್ ರಂಗಪ್ಪ, ಹಾಗೂ ದೇವಸ್ಥಾನದ ಸಿಬ್ಬಂದಿಗಳು, ರಾಜಸ್ವ ನಿರೀಕ್ಷಕ ಶಿವಪ್ರಸಾದ್, ಗ್ರಾಪಂ, ಅಧ್ಯಕ್ಷ ಎಂ ಪಿ ರತ್ನಾಕರ್, ರಕ್ಷಣಾ ಇಲಾಖೆಯವರು, ಕಂದಾಯ ಇಲಾಖೆಯವರು, ಸರ್ಕಾರಿ ಅಧಿಕಾರಿಗಳು, ದೇವಸ್ಥಾನದ ಮಾಜಿ ಅಧ್ಯಕ್ಷ ಪರಶುರಾಮ್ ಭೋವಿ, ಭಕ್ತಾಧಿಗಳು ಗ್ರಾಮಸ್ಥರು ಸರ್ವ ಸದಸ್ಯರ ಸಮ್ಮುಖದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾರಿಕೊಪ್ಪದ ಕುರುಬ ಜನಾಂಗದವರು ವಾರದ ಹಿಂದೆಯೇ ಆಗಮಿಸಿ ದೇವಿಗೆ ಪೂಜೆ ಮತ್ತು ಹರಕೆಯನ್ನು ಸಲ್ಲಿಸಿ ವಿಜಯದಶಮಿ ದಿನವಾದ ಶುಕ್ರವಾರದಂದು ಶ್ರದ್ಧಾ ಭಕ್ತಿಯಿಂದ ರೇಣುಕಾಂಬ ದೇವಿಗೆ ಬನ್ನಿ ಮುಡಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here