ಹೊಸನಗರ: ಇಂದು ಸಂಜೆ ಒಂದು ಗಂಟೆಗಳ ಕಾಲ ಮಳೆ ಬಂದಿದ್ದರು ಏಳು ಗಂಟೆ ಸುಮಾರಿಗೆ ಆಕಾಶ ಶುಭ್ರವಾಗಿದ್ದು ನೂರಾರು ಜನರು ಚಂದ್ರನ ದರ್ಶನ ಮಾಡಿ ಪುನೀತರಾದರು.
ಸೂರ್ಯಾಸ್ತದ ಜತೆಗೆ ಚಂದ್ರನ ದರ್ಶನ ಮಾಡಿ ನಮನ ಸಲ್ಲಿಸಿ ಪರಸ್ಪರ ಶುಭಾಶಯಗಳ ವಿನಿಮಯ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಚಂದ್ರ ದರ್ಶನವಾಗುತ್ತಲೇ ಮಹಿಳೆಯರು ಬಂದವರಿಗೆ ಬೇವು-ಬೆಲ್ಲ ಹಂಚುವುದು ಸಾಮಾನ್ಯ ದೃಶ್ಯವಾಗಿತ್ತು. ರಸ್ತೆಯಲ್ಲಿ ಎದುರಾದ ಗೆಳೆಯರಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವುದು, ಹಿರಿಯರಿಗೆ ನಮಸ್ಕರಿಸುವುದು ಕಂಡುಬಂದಿತು.
ಯುಗಾದಿಯಂದು ಚಂದ್ರನ ದರ್ಶನ ಮಾಡಿ ದೇವಾಲಯಕ್ಕೆ ತೆರಳಿದರೆ ಮತ್ತು ಹಿರಿಯರ ಆಶೀರ್ವಾದ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಕೆಲಸ ಮತ್ತಿತರ ಕಾರಣಗಳಿಂದ ಬೇರೆ ಕಡೆ ನೆಲೆಸಿದವರೆಲ್ಲಾ ಇದೇ ಕಾರಣಕ್ಕೆ ಯುಗಾದಿ ಹಬ್ಬಕ್ಕೆ ತಮ್ಮ-ತಮ್ಮ ಊರಿಗೆ ಬರುತ್ತಾರೆ.
ಹೊಸನಗರ ಸುತ್ತಮುತ್ತಲಿನ ಸುದ್ದಿಗಳಿಗಾಗಿ ಸಂಪರ್ಕಿಸಿ: 82771 73177