ಚಕ್ರತೀರ್ಥರ ಪರಿಷ್ಕೃತ ಪಠ್ಯದ ಬಗ್ಗೆ ಮಾಜಿ ಶಾಸಕ ಬಿ. ಸ್ವಾಮಿರಾವ್ ಆಕ್ರೋಶ ; ಮನವಿ

0
552

ರಿಪ್ಪನ್‌ಪೇಟೆ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಜಗಜ್ಯೋತಿ ಬಸವಣ್ಣ ಮತ್ತು ರಾಷ್ಟ್ರಕವಿ ಕುವೆಂಪು ಹಾಗೂ ನಾರಾಯಣಗುರುಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಅವಮಾನಿಸಿರುವ ಸಂಗತಿಯನ್ನು ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ಬಿ.ಸ್ವಾಮಿರಾವ್ ತೀವ್ರವಾಗಿ ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

ಪಟ್ಟಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರಕವಿ ಪುವೆಂಪು ಮತ್ತು ಬಸವಣ್ಣ ನಾರಾಯಣಗುರುಗಳವರ ಇತಿಹಾಸವನ್ನುರಿಯದ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಹುಚ್ಚಾಟ ಮಾಡುವವರ ಕೈಗೆ ಸರ್ಕಾರ ನೀಡಿರುವ ಕ್ರಮ ಸರಿಯಾದದಲ್ಲ ಎಂದ ಅವರು, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅನುಭವಿ ವಿದ್ವಾಂಸ ಜ್ಞಾನಪೀಠ ಪ್ರಶಸ್ತಿಗೆ ಅರ್ಹರಿರುವ ಹಿರಿಯ ಸಾಹಿತಿ ಲೇಖಕ ಬರಗೂರು ರಾಮಚಂದ್ರಪ್ಪನವರನ್ನು ಮುಂದುವರಿಸಿ ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಪಠ್ಯಪುಸ್ತಕದಲ್ಲಿ ಇತ್ತೀಚೆಗೆ ಅಗಲಿದ ಕಿರಿಯ ವಯಸ್ಸಿನ ಹಿರಿಯ ವ್ಯಕ್ತಿತ್ವದ ಯುಗಪುರುಷ ಪುನೀತ್ ರಾಜ್‍ಕುಮಾರ್ ಹೆಸರು ಸೇರ್ಪಡೆ ಮಾಡಿ ಅವರ ಆದರ್ಶ ತತ್ವಗಳು ಮುಂದಿನ ಯುವಪೀಳಿಗಗೆ ಮಾರ್ಗದರ್ಶಿಯಾಗಲು ಸಹಕಾರಿಯಾಗುವುದೆಂದ ಅವರು, ಈಗಾಗಲೇ ರಾಜ್ಯ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಅಜರಾಮರವಾಗಿ ಉಳಿದಿರುವ ಮತ್ತು ಜನಮಾನಸದಲ್ಲಿ ಹಚ್ಚಹಸಿರಾಗಿರುವಂತಹ ವ್ಯಕ್ತಿತ್ವದ ನಟ ಪುನೀತ್ ರಾಜ್‍ಕುಮಾರ್ ಇತಿಹಾಸದ ಪಠ್ಯದಲ್ಲಿ ಪ್ರಕಟಗೊಳ್ಳಲಿ ಎಂದು ಆಶಿಸಿದರ ಅವರು, ರಾಷ್ಟ್ರಕವಿ ಕುವೆಂಪು ಮತ್ತು ಬಸವಣ್ಣ ಹಾಗೂ ನಾರಾಯಣಗುರು ಧರ್ಮಗುರುಗಳ ಬಗ್ಗೆ ಅವಮಾನಿಸಿರುವ ರೋಹಿತ್ ಚಕ್ರತೀರ್ಥರ ಸಮಿತಿಯ ಪಠ್ಯಪರಿಷ್ಕರಣೆಯನ್ನು ತಕ್ಷಣ ರದ್ದುಗೊಳಿಸಿ ಈ ಹಿಂದಿನಂತೆಯೆ ಇರುವ ಪಠ್ಯ ಕ್ರಮವನ್ನು ಬೋಧಿಸಲು ಅವಕಾಶ ಮಾಡಿಕೊಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಈ ಬಗ್ಗೆ ಬಿಜೆಪಿ ಪಕ್ಷದಲ್ಲಿ ಹೆಚ್ಚು ಹೆಚ್ಚು ಅನುಭವಿಗಳಿದ್ದರೂ ಕೂಡ ಯಾರು ಮಾತನಾಡದಿರುವುದು ನೋವಿನ ಸಂಗತಿ. ನಾನು ಇಂತಹ ಸಮಸ್ಯೆಗಳು ಎದುರಾದರೆ ತಕ್ಷಣ ಖಂಡಿಸುವ ವ್ಯಕ್ತಿ. ನನ್ನ ಬಗ್ಗೆ ಪಕ್ಷದವರು ಕ್ರಮ ಕೈಗೊಳ್ಳುತ್ತಾರೆಂಬ ಬಗ್ಗೆ ಹೆದರಿಕೆಯಿಲ್ಲ, ಎದುರಿಸಲು ಸಿದ್ದನಿದ್ದು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ತುಂಬಾ ಡ್ಯಾಮೇಜ್ ಆಗಿರುವುದೆಂದ ಅವರು, ಇನ್ನಾದರು ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಈ ಹಿಂದೆ ಇದ್ದಂತ ಬರಗೂರು ರಾಮಚಂದ್ರಪ್ಪನವರ ಪಠ್ಯಪುಸ್ತಕ ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here