‘ಚಡ್ಡಿ ಸುಡ್ತೇವೆ ಎಂದ್ರೆ ಸುಡ್ಲಿ, ನಮ್ ಹಳೆಯ ಚಡ್ಡಿಗಳಿವೆ ಕಳಿಸ್ಕೊಡ್ತೇವೆ’

0
273

ಚಿಕ್ಕಮಗಳೂರು: ‘ಚಡ್ಡಿ ಸುಡುತ್ತೇವೆ ಎಂದರೆ ಸುಡಲಿ, ನಮ್ಮ ಹಳೆಯ ಚಡ್ಡಿಗಳು ಇವೆ. ಕಳುಹಿಸಿಕೊಡುತ್ತೇವೆ. ಕಾಂಗ್ರೆಸ್‌ನವರ ಒಲೈಕೆ, ದುರಹಂಕಾರದ ರಾಜಕಾರಣವನ್ನು ಜನ ಸಹಿಸುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ಬಿಜೆಪಿಯವರಿಗೆ ಕೋಮು ನಶೆ ಏರಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜಾತಿ ಅಸ್ತಿತ್ವ ಇಲ್ಲವಾದರೆ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅವರ ರಾಜಕೀಯ ಅಸ್ತಿತ್ವ ಇಲ್ಲವಾಗುತ್ತದೆ. ಅದಕ್ಕಾಗಿ ಅವರು ಜಾತಿ ರಾಜಕಾರಣ ಬೆಳೆಸುತ್ತಾರೆ. ಒಂದು ಕುಟುಂಬದ ಜೀತದಾಳುಗಳ ರೀತಿಯಲ್ಲಿ ಯೋಚಿಸುವವರಿಗೆ ಆರ್‌ಎಸ್‌ಎಸ್‌ ಯಾರನ್ನು ಬೆಳೆಸಿದೆ ಎಂಬುದು ಅರ್ಥವಾಗಲ್ಲ’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್‌ನವರು ಅಂಬೇಡ್ಕರ್‌ ಅವರನ್ನು ಅವಮಾನಿಸಿದ್ದಾರೆ. ಈಗ ದಲಿತರು ಬಿಜೆಪಿಯ ಜತೆಗಿದ್ದಾರೆ ಎಂಬುದು ಕಾಂಗ್ರೆಸ್‌ನವರಿಗೆ ಸಂಕಟವಾಗಿದೆ. ಅವರನ್ನು ದೂರ ಮಾಡಲು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರನ್ನು ಎದುರಿಸಿ, ಅವರ ಬಣ್ಣ ಬಿಚ್ಚಿಡುತ್ತೇವೆ’ ಎಂದು ಕುಟುಕಿದರು.

ಜಾಹಿರಾತು

LEAVE A REPLY

Please enter your comment!
Please enter your name here