“ಚಾಂದ್ರಮಾನ ಯುಗಾದಿ” ಸುಖ, ಶಾಂತಿ, ಸಂವೃದ್ಧಿ ತರಲಿ ; ಹೊಂಬುಜ ಶ್ರೀಗಳು

0
278

ರಿಪ್ಪನ್‌ಪೇಟೆ: ‘ಯುಗಾದಿ’(ಯುಗ+ಆದಿ)ಯ ಶುಭ ಸಂದರ್ಭದಲ್ಲಿ ಶುಭ ಸಂಕಲ್ಪಗಳನ್ನು ಮಾಡುವ ಮೂಲಕ ಮುಂದಿನ ಒಂದು ವರ್ಷದವರೆಗೆ ಪ್ರಗತಿ ಪಥದಲ್ಲಿ ಸಾಗುವ ನಿಶ್ಚಯ ಮಾಡಿಕೊಳ್ಳುವುದು ಮಾನವ ಸಹಜ ನೋವು-ನಲಿವುಗಳ ಮಧ್ಯೆ ಸುಮಧುರ ಭಾವನೆಗಳನ್ನು ಮನದಲ್ಲಿ ಪುನಃ ಪುನಃ ಚಿಂತಿಸುವ ಮೂಲಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ ಎಂದು ಹೊಂಬುಜ ಜೈನ ಮಠಧ ಡಾ.ದೇವೇಂದ್ರಕೀರ್ತಿ ಭಟ್ಟಾರಕಪಟ್ಟಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಯುಗಾದಿಯ ಹಬ್ಬದ ಅಂಗವಾಗಿ ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಪಂಚಾಂಗದ ಭವಿಷ್ಯಕ್ಕಿಂತಲೂ ಪುರುಷಾರ್ಥ, ಪರಿಶ್ರಮಗಳಿಂದ ಪ್ರತಿಫಲದ ಅಪೇಕ್ಷೆ ಮಾಡುವ ಮೂಲಕ ಸುಂದರ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವ ಸಮಾಜದಲ್ಲಿ ಶಾಂತಿ-ಸೌಹಾರ್ದತೆಯಿಂದ ಸಮೃದ್ಧಿ ಕಾಣುವಂತಾಗಲಿ ಎಂದು ಆಶಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here