ಚಾರ್ಮಾಡಿ ಘಾಟ್‌ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸೋರಿಕೆಯಾಗುತ್ತಿರುವ ಪೆಟ್ರೋಲ್ !

0
1711

ಮೂಡಿಗೆರೆ: ತಾಲೂಕಿನ ಚಾರ್ಮಾಡಿ ಘಾಟ್‌ನ ಅಲೇಕಾನ್ ಸಮೀಪ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ‌ ಪೆಟ್ರೋಲ್ ಸೋರಿಕೆಯಾದ ಘಟನೆ ನಡೆದಿದೆ.

ಮಂಗಳೂರಿನಿಂದ ಮಾಗುಂಡಿಗೆ ಪೆಟ್ರೋಲ್ ಸಾಗುತ್ತಿದ್ದ ಟ್ಯಾಂಕರ್ ಅಲೇಕಾನ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಟ್ಯಾಂಕರಿನಲ್ಲಿ 8 ಸಾವಿರ ಲೀಟರ್ ಪೆಟ್ರೋಲ್ ಮತ್ತು 4 ಸಾವಿರ ಲೀಟರ್ ಡಿಸೇಲ್ ಸಂಗ್ರಹವಿದ್ದು ಪೆಟ್ರೋಲ್ ಸೋರಿಕೆಯಾಗುತ್ತಿದೆ.

ಸ್ಥಳಕ್ಕೆ ಬಣಕಲ್ ಪೋಲಿಸರು ಆಗಮಿಸಿದ್ದು ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ‌.

ಜಾಹಿರಾತು

LEAVE A REPLY

Please enter your comment!
Please enter your name here