ಚಾಲಕನ ನಿಯಂತ್ರಣ ತಪ್ಪಿ ಎರಡು ಪಲ್ಟಿಯಾದ ಕಾರು..! ಓರ್ವನಿಗೆ ಗಂಭೀರ ಗಾಯ..!!

0
1142

ಶೃಂಗೇರಿ: ಕಾರ್ಕಳದಿಂದ ಬರುತ್ತಿದ್ದ ಕಾರೊಂದು ಪಲ್ಟಿಯಾಗಿ ಓರ್ವನಿಗೆ ಗಂಭೀರ ಗಾಯವಾದ ಘಟನೆ ತಾಲ್ಲೂಕಿನ ಮೆಣಸೆ ಗ್ರಾಮದ ಬಳಿ ನಡೆದಿದೆ.

ವೇಗವಾಗಿ ಬರುತ್ತಿದ ಮಾರುತಿ ಸೆಲೆರಿಯೊ ಕಾರು ಚಾಲಕನ ನಿಯಂತ್ರಣ ತಪ್ಪಿ ಎರಡು ಬಾರಿ ಪಲ್ಟಿಯಾಗಿದ್ದು, ಮಹಿಳೆ ಸೇರಿ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಓರ್ವ ಪ್ರಯಾಣಿಕನಿಗೆ ತೀವ್ರ ಪ್ರಮಾಣದ ಗಾಯಗಳಾಗಿದ್ದು ಕಾರು ಬಹುತೇಕವಾಗಿ ಜಖಂಗೊಂಡಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಕಾರನ್ನು ಎತ್ತಿ, ಪ್ರಯಾಣಿಕರನ್ನು ರಕ್ಷಿಸಿ ಬೇರೆ ವಾಹನದಲ್ಲಿ ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ.

ಅಪಘಾತದಿಂದ ಕೆಲಕಾಲ ಜಯಪುರ-ಶೃಂಗೇರಿ ಸಂಚಾರ ಅಸ್ತವ್ಯಸ್ತಗೊಂಡಿದಾರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಅಪಘಾತ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here