ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಕಾರು: ಓರ್ವ ಸ್ಥಳದಲ್ಲೇ ಸಾವು !

0
4615

ಶಿವಮೊಗ್ಗ : ತಾಲೂಕಿನ ಕುಂಸಿಯಲ್ಲಿ ಕಾರೊಂದು‌ ಮೋರಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು ಕಂಡಿರುವ ಘಟನೆ ವರದಿಯಾಗಿದೆ.

ಸೈಯದ್ ನೈಫ್ (19) ಸಾವು ಕಂಡ ಯುವಕನಾಗಿದ್ದು, ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಶಿವಮೊಗ್ಗದ ತಂಗಿಯ ಮನೆಯಿಂದ ಸಾಗರಕ್ಕೆ ಮಾರುತಿ ಸಿಎಸ್ ಕಾರಿನಲ್ಲಿ ಸೈಯದ್ ನೈಫ್ ಮೂವರ ಜೊತೆ ಹೋಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಕುಂಸಿ ಬಳಿಯ ಮೋರಿಗೆ ಗುದ್ದಿ ಪಲ್ಟಿಯಾಗಿದೆ.

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here