ಚಿಕ್ಕಬೀರನಕೆರೆ ಪುನಶ್ಚೇತನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆದ್ಯತೆ

0
280

ರಿಪ್ಪನ್‌ಪೇಟೆ: ಸರ್ಕಾರ ಮಾಡದಂತಹ ಅಭಿವೃದ್ದಿ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಶ್ವಾರ್ಥ ಸೇವೆಯ ಮೂಲಕ ಕೆರೆಗಳ ಪುನಶ್ಚೇತನಕ್ಕೆ ಹೆಚ್ಚು ಆದ್ಯತೆ ನೀಡುವುದರೊಂದಿಗೆ ಕೆರೆಗಳಲ್ಲಿನ ಹೂಳು ತೆಗೆದು ಅಂತರ್ಜಲ ಹೆಚ್ಚಿಸುವ ಕಾರ್ಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಗಳ ಕನಸು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಗ್ರಾಮಾಧ್ಯಕ್ಷೆ ಮಂಜುಳಾರವರ ಅಧ್ಯಕ್ಷತೆಯಲ್ಲಿ ಚಿಕ್ಕಬೀರನಕೆರೆ ಕೆರೆ ಹೂಳು ತೆಗೆಯುವ ಬಗ್ಗೆ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಈಗಾಗಲೇ ನಮ್ಮೂರು ನಮ್ಮ ಕೆರೆ ವಿಚಾರದಲ್ಲಿ ಸಾರ್ವಜನಿಕರ ಸಹಭಾಗಿತ್ವದ ಕುರಿತು ಸ್ವಪ್ರೇರಣೆಯೊಂದಿಗೆ ಸಾರ್ವಜನಿಕರು ಇಂತಹ ಅಭಿವೃದ್ಧಿ ಕಾರ್ಯದಲ್ಲಿ ಪಕ್ಷ ಬೇದ ಮರೆತು ಸಹಕರಿಸುವಂತೆ ಮನವಿ ಮಾಡಿದರು.

ಗವಟೂರು ಗ್ರಾಮದ ಚಿಕ್ಕಬೀರನ ಕೆರೆಯ ರಾಜ್ಯ ಹೆದ್ದಾರಿ ಶಿವಮೊಗ್ಗ-ಬೈಂದೂರು ರಸ್ತೆ ರಿಪ್ಪನ್‌ಪೇಟೆ ಕೆರೆಗೆ 5 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯಿಂದ ನೀಡಲಾಗುತ್ತದೆ ಈ ಅನುದಾನದಲ್ಲಿ ಜೆಸಿಬಿ ಯಂತ್ರದಲ್ಲಿ ಹೂಳು ತೆಗೆದು ಕೆರೆ ದಂಡೆ ನಿರ್ಮಿಸಲಾಗುವುದು ಉಳಿದಂತೆ ಹೂಳನ್ನು ಬೇರೆಕಡೆ ಸಾಗಿಸಲು ಟ್ರ್ಯಾಕ್ಟರ್ ಮತ್ತು ಟಿಪ್ಪರ್ ಮೂಲಕ ಸಾಗಾಣಿಕೆಗೆ ಸಾರ್ವಜನಿಕರು ಸ್ವ ಪ್ರೇರಣೆಯಿಂದ ಹಾಜರಿದ್ದು ನಿಮ್ಮೂರಿನ ಕೆರೆಯ ಪುನಶ್ಚೇತನದ ಮೂಲಕ ಅಂತರ್ಜಲ ಹೆಚ್ಚಿಸಲು ಸಾಧ್ಯವಾಗುವುದು ಈಗಾಗಲೆ ಪಕ್ಕದ ಹರತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಟಿ ಕೆರೆಯ ಜೀರ್ಣೇದ್ದಾರ ಕಾರ್ಯ ಕೈಗೊಂಡು ಸುಮಾರು ಮೂರ್ನಾಲ್ಕು ಅಡಿಯಷ್ಟು ನೀರು ಸಂಗ್ರಹವಾಗಿರುವುದು ಮತ್ತು ಸುತ್ತಮುತ್ತಲಿನ ಕೊಳವೆ ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿರುವುದನ್ನು ಸಭೆಯಲ್ಲಿ ಸಾಕಷ್ಟು ವಿವರಿಸಲಾಯಿತು.

ಶಿವಮೊಗ್ಗ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಗೀತಾ,ಹೊಸನಗರ ತಾಲ್ಲೂಕ್ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಬೇಬಿ,ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ ,ಕೆರೆ ಸಂಪನ್ಮೂಲ ಯೋಜನೆಯ ಇಂಜಿನಿಯರ್ ಗಣಪತಿ, ಕೃಷಿ ಮೇಲ್ವಿಚಾರಕ ಶಶಿಧರ, ಪಿಡಿಓ ಜಿ.ಚಂದ್ರಶೇಖರ್, ರಿಪ್ಪನ್‌ಪೇಟೆ ಮೇಲ್ವಿಚಾರಹರೀಶ್‌ಕುಮಾರ್ ಇನ್ನಿತರರು ಹಾಜರಿದ್ದರು.

ಕೆರೆ ಸಮಿತಿಗೆ ಅಧ್ಯಕ್ಷರಾಗಿ ಎನ್.ಸತೀಶ್ ಆಯ್ಕೆ:

ಇಂದು ನಡೆದ ಕೆರೆ ಸಮಿತಿ ಅಯ್ಕೆಯಲ್ಲಿ ಸಿದ್ದಿವಿನಾಯಕ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎನ್.ಸತೀಶ್ ಅಧ್ಯಕ್ಷರನ್ನಾಗಿ ಅಮೀರ್ ಹಂಜಾ ಉಪಾಧ್ಯಕ್ಷರಾಗಿ ಎಂ.ಬಿ.ಮಂಜುನಾಥ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸುಮಾರು 23 ಜನ ಸಮಿತಿಯ ಸದಸ್ಯರಾಗಿ ಅಯ್ಕೆ ಮಾಡಲಾಯಿತು.

ಜೆ.ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here