ಚಿಕ್ಕಮಗಳೂರು ಜಿಲ್ಲೆಯಲ್ಲಿ 575 ಫಲಾನುಭವಿಗೆ ನಿವೇಶನ ಹಕ್ಕುಪತ್ರ ವಿತರಣೆ

0
93

ಚಿಕ್ಕಮಗಳೂರು: ಜನವರಿ ಅಂತ್ಯದವರೆಗೆ ಜಿಲ್ಲೆಯಲ್ಲಿ ನಿವೇಶನ ರಹಿತ 575 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗುತ್ತಿದ್ದು, 46.13 ಎಕರೆಯನ್ನು ಗುರುತಿಸಲಾಗಿದೆ.

ಚಿಕ್ಕಮಗಳೂರು ತಾಲೂಕಿನ 5 ಗ್ರಾಮಗಳಲ್ಲಿ 19.13 ಎಕರೆಯಲ್ಲಿ 259 ಫಲಾನುಭವಿಗಳು, ಕಡೂರು ತಾಲೂಕಿನ 2 ಗ್ರಾಮಗಳಲ್ಲಿ 7 ಎಕರೆಯಲ್ಲಿ 86 ಫಲಾನುಭವಿಗಳಿಗೆ, ಕೊಪ್ಪದ 5 ಗ್ರಾಮಗಳಲ್ಲಿ 13 ಎಕರೆಯಲ್ಲಿ 84 ಫಲಾನುಭವಿಗಳು ವಿತರಿಸಲು ಹಕ್ಕು ಪತ್ರಗಳನ್ನು ಸಿದ್ಧಗೊಂಡಿವೆ.

ಶೃಂಗೇರಿ ತಾಲೂಕಿನ 1 ಗ್ರಾಮದಲ್ಲಿ 1 ಎಕರೆಯಲ್ಲಿ 29 ಫಲಾನುಭವಿಗಳಿಗೆ ಅಜ್ಜಂಪುರದ 1 ಗ್ರಾಮದಲ್ಲಿ 25ಜನರಿಗೆ 1 ಎಕರೆ, ಮೂಡಿಗೆರೆಯಲ್ಲಿ 1 ಗ್ರಾಮಕ್ಕೆ 92 ಫಲಾನುಭವಿಗಳಿಗೆ ನಿವೇಶನರಹಿತರಿಗೆ ಹಕ್ಕುಪತ್ರವನ್ನು ನೀಡಲು 5 ಎಕರೆಜಾಗವನ್ನು ಈಗಾಗಲೇ ಗುರುತಿಸಲಾಗಿದೆ.

ನಿವೇಶನ ಹಾಗೂ ಇತರೆ ಸರ್ಕಾರಿ ಉದ್ದೇಶಕ್ಕಾಗಿ ಮಂಜೂರಾಗಿ ದುರಸ್ಥಿಗೊಳಿಸಲು ಜಿಲ್ಲಾಧಿಕಾರಿ ಕಚೇರಿಗೆ ಪ್ರಸ್ತಾವನೆಯ ಕ್ರೋಢಿಕೃತ 195.17 ಎಕರೆ ಜಾಗದ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ.

ಅಜ್ಜಂಪುರದಲ್ಲಿ ಆಶ್ರಯ ನಿವೇಶನಕ್ಕಾಗಿ 31.24 ಎಕರೆ, ಚಿಕ್ಕಮಗಳೂರು ತಾಲೂಕಿನಲ್ಲಿ 36.30 ಎಕರೆ, ಕೊಪ್ಪದಲ್ಲಿ 43.08, ಮೂಡಿಗೆರೆ 18.02, ನರಸಿಂಹರಾಜಪುರ 44.01 ಎಕರೆ ಶೃಂಗೇರಿ ತಾಲೂಕಿನಲ್ಲಿ 19.32 ಎಕರೆ ಹಾಗೂ ತರೀಕೆರೆ ತಾಲೂಕಿನಲ್ಲಿ 2 ಎಕರೆಯನ್ನು ದುರಸ್ಥಿಗೊಳಿಸಲು ಪ್ರಸ್ತಾವನೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here