23.2 C
Shimoga
Sunday, November 27, 2022

ಚಿಣ್ಣರ ಬಾಲ್ಯ ಕಸಿದುಕೊಂಡಿದೆಯಾ ಹೊಸನಗರ ಪಟ್ಟಣ ಪಂಚಾಯಿತಿ ಆಡಳಿತ ?

ಹೊಸನಗರ : ಜಾತಿ-ಧರ್ಮ, ಮೇಲು-ಕೀಳು, ಬಡವ-ಬಲ್ಲಿದ ಎಂಬ ಬೇಧ ಭಾವ ಇಲ್ಲದೆ ಕೂಡಿ ಬದುಕುವ ಬದುಕು ರೂಪಿಸುವ ಏಕೈಕ ಸ್ಥಾನ ಉದ್ಯಾನವನ. ಇದು ಮಕ್ಕಳ ಪಾಲಿನ ಸ್ವರ್ಗ. ಆದರೆ ಹೊಸನಗರ ಪಟ್ಟಣದ ಮಕ್ಕಳು ಈ ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿವೆ. ಕಾರಣ ಪಟ್ಟಣ ಪಂಚಾಯಿತಿಯ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ.

ಹೌದು, ನೆಹರು ಮೈದಾನದ ಆವರಣದಲ್ಲಿ ಸ್ಪೋರ್ಟ್ಸ್ ಅಸೋಸಿಯೇಷನ್‌ ರವರ ಮಕ್ಕಳ ಆಟಿಕೆ ಸೌಲಭ್ಯ ಹೊರತುಪಡಿಸಿದರೆ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದ ಉದ್ಯಾನವನ ಮಾರಿಗುಡ್ಡದ ಶ್ರೀ ಮಾರಿಕಾಂಬ ದೇವಸ್ಥಾನದ ಎಡ ಭಾಗದಲ್ಲಿರುವ ಪೊಲೀಸ್ ವಸತಿ ಗೃಹ ಸಮುಚ್ಚಯದ ಪಕ್ಕದಲ್ಲಿರುವ ಉದ್ಯಾನವನ ಹಾಗೂ ದೇವಸ್ಥಾನದ ಎದುರು ಭಾಗದಲ್ಲಿರುವ ಜಾತ್ರಾ ಮೈದಾನದ ಹಿಂಭಾಗದ ಉದ್ಯಾನವನಗಳು ಕುರುಚಲ ಕಾಡು ಗಿಡಗಳಿಂದ ತುಂಬಿ ಅಲ್ಲಿ ಮಕ್ಕಳಿರಲಿ ದೊಡ್ಡವರು ಓಡಾಡುವುದು ದುಸ್ತರವಾಗಿದೆ.

ಕಾಡು, ಮುಳ್ಳಿನ ಗಿಡ-ಗಂಟಿಗಳು ಉದ್ಯಾನ ವನಗಳ ನಿರ್ವಹಣೆ ಇಲ್ಲದೆ ಆಳೆತ್ತರದ ಕಳೆ ಬೆಳೆದು ಕುಳಿತುಕೊಳ್ಳುವ ಹಾಸುಗಲ್ಲುಗಳು ಜೋಕಾಲಿ ಜಾರು ಬಂಡಿಗಳು ಕೊಲಂಬಸ್ ಮತ್ತಿತರ ಆಟಿಕೆ ಪರಿಕರಗಳು ಕಣ್ಣಿಗೆ ಕಾಣದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಈ ಹಿಂದಿನ ಪೀಳಿಗೆಗಳು ಅನುಭವಿಸಿದ ಬಾಲ್ಯಗಳಿಂದ ಇಂದಿನ ಮಕ್ಕಳು ವಂಚಿತವಾಗಿ ಮೊಬೈಲ್ ಚಟಕ್ಕೆ ಬಿದ್ದಿರುವುದು ವಿಪರ್ಯಾಸವಾಗಿದೆ.

ಈ ಹಿಂದೆ ಅವಿಭಕ್ತ ಕುಟುಂಬಗಳಿದ್ದು ಈಗ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸಿದ್ದು ಗಂಡ ಹೆಂಡತಿಯ ಸಂಸಾರದಲ್ಲಿ ಒಂದೇ ಮಕ್ಕಳಿದ್ದು ಈ ಮಕ್ಕಳ ಬಾಲ್ಯದ ಜೀವನ ಅರಳುವುದರ ಬದಲು ಕಮರುತ್ತಿರುವುದು ದುರಂತ ಎನಿಸಿದೆ.

ನಮ್ಮ ಹಿರಿಯರು ಹೇಳುವ ಬಾಲ್ಯದ ಅನುಭವಗಳನ್ನು ನೆನೆಸಿಕೊಂಡರೆ ಈಗಿನ ಮಕ್ಕಳು ಆ ಸುಂದರ ಕ್ಷಣಗಳಿಂದ ವಂಚಿತರಾಗುತ್ತಿರುವುದು ವಿಷಾದನೀಯವಾಗಿದೆ.

ಇನ್ನದರೂ ಇಲ್ಲಿನ ಸ್ಥಳೀಯಾಡಳಿತ ಇತ್ತ ಗಮನಹರಿಸುವುದೇ ಕಾದು ನೋಡಬೇಕಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!