ಚೆಕ್ ಅಮಾನ್ಯೀಕರಣ: 03 ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರಿಗೆ ಲಕ್ಷಾಂತರ ರೂ. ದಂಡದ ಜೊತೆಗೆ ಶಿಕ್ಷೆ !

0
1345

ಹೊಸನಗರ ತಾಲೂಕು ಕೆರೆಹಳ್ಳಿ ಹೋಬಳಿಯ ರಘುಪತಿ ಗೌಡ ಎಂಬವರ ಪುತ್ರ ಕೆ.ಆರ್ ರವೀಂದ್ರ ಎಂಬುವವರು ಹೊಸನಗರ ತಾಲೂಕು ಹೆಬೈಲ್’ನ ಲಿಂಗರಾಜ ರವರ ಪುತ್ರ ಗಣೇಶ್ ಎಂಬುವವರಿಗೆ ಹಣದ ವ್ಯವಹಾರದಲ್ಲಿ ಚೆಕ್ ನೀಡಿದ್ದು ಚೆಕ್ ನಮೂದಿಸಿದ ದಿನಾಂಕದಂದು ನಗದು ಆಗದ ಕಾರಣ ಗಣೇಶ್ ರವರು ಹೊಸನಗರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ಕಾರಣ ಈ ಪ್ರಕರಣದಲ್ಲಿ ಆರೋಪಿ ರವೀಂದ್ರರವರಿಗೆ 2 ಲಕ್ಷದ 50 ಸಾವಿರ ರೂ. ದಂಡ ಹಾಗೂ ಒಂದು ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಇದೇ ಆರೋಪಿ ರವೀಂದ್ರ ರವರು ಹೆಬೈಲ್’ನ ಎಚ್.ಎಸ್ ರಾಜೇಂದ್ರ ಎಂಬುವವರಿಗೆ ಹಣದ ವ್ಯವಹಾರದಲ್ಲಿ ನೀಡಿದ ಚೆಕ್ ಸಹ ಅಮಾನ್ಯಗೊಂಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಕೆ. ರವಿಕುಮಾರ್ ಅವರು ಆರೋಪಿಗೆ 1,79,000 ರೂ. ದಂಡ ಹಾಗೂ ಒಂದು ವರ್ಷ ಸಜೆ ವಿಧಿಸಿರುತ್ತಾರೆ.

ಇನ್ನೊಂದು ಪ್ರಕರಣದಲ್ಲಿ ನಗರದ ಉಮೇಶ್ ಎಂಬುವವರಿಗೆ ನಗರದ ಬಂಡಿಮಠ ವಿಲಿಯಂ ಡಿಸೋಜ ಎಂಬುವವರ ಮಗ ರಾಜೇಶ್ ಡಿಸೋಜ ಎಂಬುವವರು ಹಣದ ವ್ಯವಹಾರದಲ್ಲಿ ಚೆಕ್ ನೀಡಿದ್ದು ಈ ಚೆಕ್ ಸಹ ಅಮಾನ್ಯಗೊಂಡಿದ್ದರಿಂದ ಆರೋಪಿ ರಾಜೇಶ್ ಡಿಸೋಜ ರವರಿಗೆ 2,95,000 ರೂ. ದಂಡ ಹಾಗೂ ಒಂದು ವರ್ಷ ಸಜೆ ವಿಧಿಸಿರುವುದಾಗಿ ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here