ಚೋರ್ ಬಜಾರ್’ನಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಸೆಂದಿಲ್ ಸಾವು !

0
806

ಶಿವಮೊಗ್ಗ: ಮೊನ್ನೆ ಶಿವಮೊಗ್ಗದ ಗಾಂಧಿ ಬಜಾರ್ ಬಟ್ಟೆ ಮಾರ್ಕೆಟ್ (ಚೋರ್ ಬಜಾರ್) ನಲ್ಲಿ ಸಂಜೆ 7-30 ರ ಸಮಯದಲ್ಲಿ ಸೆಂದಿಲ್ ಕುಮಾರ್ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಇಂದು ಬೆಳಗಿನ ಜಾವದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಹಿಂದೆ ಅಂದರೆ ಸುಮಾರು ಒಂಬತ್ತು ತಿಂಗಳ ಹಿಂದೆ ಮೃತ ಸೆಂದಿಲ್ ನ ಸ್ನೇಹಿತ ಸಂತೋಷ್ (ಜೋಗಿ ಸಂತು) ವಿನ ಜೊತೆಯಲ್ಲಿ ಹಣದ ವ್ಯವಹಾರದ ವಿಷಯದಲ್ಲಿ ಜಗಳವಾಗಿದ್ದು ಆಗ ಸೆಂಧಿಲ್ ಜೋಗಿ ಸಂತುವಿನ ಮೇಲೆ ಅಟ್ಯಾಕ್ ಮಾಡಿದ್ದನು. ಈ ಅಟ್ಯಾಕ್ ನಿಂದ ಗಾಯಗೊಂಡಿದ್ದ ನಂತರ ದೊಡ್ಡಪೇಟೆ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ಆಗಿ ಸೆಂದಿಲ್ ನನ್ನು ಜೈಲಿಗೆ ಕೂಡಾ ಹಾಕಿದ್ದರು. ನಂತರದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಸೆಂದಿಲ್ ಕಾಲರ್ ಏರಿಸಿಕೊಂಡು ಓಡಾಡುತ್ತಿದ್ದ ಮತ್ತು ಬಟ್ಟೆಯ ಬಜಾರ್ ನಲ್ಲಿ ಮನೋಜ್ ಟೆಕ್ಸ್ ಟೈಲ್ಸ್ ಎಂಬ ಹೆಸರಿನ ಬಟ್ಟೆಯಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ. ಈಗ್ಗೆ ಒಂದು ವಾರದ ಹಿಂದೆ ಜೋಗಿ ಸಂತು ಎದುರಿಗೆ ಸಿಕ್ಕಾಗ ಸ್ವಲ್ಪ ಕಿರಿಕ್ ಕೂಡಾ ಆಗಿತ್ತು. ಒಂದು ಮಾಹಿತಿಗಳ ಪ್ರಕಾರ ಇವರಿಬ್ಬರಿಗೂ ನಟೋರಿಯಸ್ ಗಳ ಒಡನಾಟವಿತ್ತೆಂದು ತಿಳಿದುಬರುತ್ತದೆ. ಒಳ್ಳೆಯ ಹೆಸರನ್ನೇನು ಸಂಪಾದನೆ ಮಾಡದ ಇವರುಗಳು ವ್ಯವಹಾರದಲ್ಲಿ ವೈಮನಸ್ಸು ಹೊಂದಿದ್ದರು. ಇದೇ ಜೋಗಿ ಸಂತು ಬಜಾರ್ ನ ಒಳಗಡೆ ಎರೆಡು ವರ್ಷಗಳ ಹಿಂದೆ ಬಟ್ಟೆಯ ವ್ಯಾಪಾರ ಮಾಡಿಕೊಂಡಿದ್ದ ಹಾಗೆಯೇ ವ್ಯವಹಾರದಲ್ಲಿ ಲಾಸ್ ಆಗಿದ್ದರಿಂದ ಅಂಗಡಿ ತೆಗೆದಿದ್ದ ಕೂಡಾ. ಮೊನ್ನೆ ಸೆಂದಿಲ್ ಮೇಲೆ ಅಟ್ಯಾಕ್ ಮಾಡುವಾಗ ಜೋಗಿ ಸಂತು ಮತ್ತು ಮೂವರು ಸ್ನೇಹಿತರ ಜೊತೆಯಲ್ಲಿ ಮಧ್ಯಾಹ್ನದಿಂದ ಸೆಂದಿಲ್ ಅಂಗಡಿಯ ಮುಂದೆ ಕ್ಯಾಟ್ ವಾಕ್ ಮಾಡಿದ್ದಾರೆ ನಂತರ 7-30 ಸಮಯದಲ್ಲಿ ಮತ್ತೆ ಬಂದಿದ್ದು ಇಬ್ಬರು ಹೊರಗೆ ನಿಂತಿದ್ದು ಇಬ್ಬರು ಮಾರ್ಕೆಟ್ ನ ಒಳಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿ ಹೊಟ್ಟೆಯ ಭಾಗದಲ್ಲಿ ಎದೆಯ ಭಾಗದಲ್ಲಿ ಚಾಕುವಿನಿಂದ ತಿವಿದ್ದಿದ್ದರು.

ಈ ರೀತಿಯ ಅಚಾನಕ್ ಅಟ್ಯಾಕ್ ನಿಂದ ಜೀವ ಉಳಿಸಿಕೊಳ್ಳುವ ಸಲುವಾಗಿ ತನ್ನ ಪಕ್ಕದ ಅಂಗಡಿಯ ಕೆಳಗೆ ತೂರಿಕೊಂಡ ಸೆಂಧಿಲ್ ಪ್ರಾಣ ಉಳಿಸಿಕೊಂಡಿದ್ದ.. ನಂತರದಲ್ಲಿ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಪಡೆದಿದ್ದು ಅಂದೇ ತಡರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕುಟುಂಬದವರು ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಹರ್ಷನ ಹತ್ಯೆಯಿಂದ ಬೆಚ್ಚಿದ್ದ ಶಿವಮೊಗ್ಗ ಮತ್ತೊಂದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಕೂಡಾ. ಶಿವಮೊಗ್ಗ ಪೋಲಿಸರ ಅಭಯ ಮತ್ತು ಶಾಂತಿಯ ವಾತಾವರಣ ಮೂಡಿಸುವಲ್ಲಿ ಸಫಲರಾಗಿದ್ದಾರೆ.

ಈ ಸಂಬಂಧಪಟ್ಟಂತೆ ಶಿವಮೊಗ್ಗ ದೊಡ್ಡಪೇಟೆ ಪೋಲಿಸ್ ಠಾಣೆಯಲ್ಲಿ “ಜೋಗಿ ಸಂತು” (ಸಂತೋಷ್). “ರಮೇಶ್” “ಲೋಕೇಶ್” ಮತ್ತೊಬ್ಬ ಆರೋಪಿಯೂ ಸೇರಿದಂತೆ ನಾಲ್ವರ ಮೇಲೆ ಎಫ್ಐಆರ್ ದಾಖಲಾಗಿದೆ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here