ರಿಪ್ಪನ್ಪೇಟೆ: ಇಲ್ಲಿನ ಬರುವೆ ಗ್ರಾಮದಲ್ಲಿರುವ ಶ್ರೀಚೌಡೇಶ್ವರಿ ದೇವಸ್ಥಾನದ 31 ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕಲಾಭಿವೃದ್ದಿ ಶ್ರೀದುರ್ಗಾಹೋಮವು ಶ್ರದ್ಧಾ ಭಕ್ತಿಯೊಂದಿಗೆ ಜರುಗಿತು.
ವೇ.ವಿ.ನಾಗರಾಜ್ ಅಡಿಗರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕ ಪ್ರಮುಖಭಟ್ಟರು ಚೌಡೇಶ್ವರಿ ದೇವಿಗೆ 108 ಕಲಶಾಪಪೂರ್ವಕ ಸಾಮೂಹಿಕ ಕುಂಭಾಭಿಷೇಕ ಮತ್ತು ಗಣಹೋಮ ಕಲಾಭಿವೃದ್ದಿ ಹೋಮ ಶ್ರೀದುರ್ಗಾಹೋಮದೊಂದಿಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ಧಾರ್ಮಿಕ ಕೈಂಕರ್ಯದಲ್ಲಿ ಸಂಪನ್ನಗೊಂಡಿತು.
ಕೊರೊನಾ ಮಹಾಮಾರಿಯಿಂದಾಗಿ ಎಲ್ಲ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗಿದ್ದು ಭಕ್ತರು ಶ್ರದ್ಧೆಯಿಂದ ಶುದ್ಧ ಮನಸ್ಸಿನಿಂದ ದೇವಿಯ ಅರಾಧನೆಯನ್ನು ನೆರವೇರಿಸಿ ಲೋಕಕಲ್ಯಾಣಾರ್ಥವಾಗಿ ಈ ವಾರ್ಷೀಕೋತ್ಸವದಲ್ಲಿ ದೇಶವನ್ನು ಕೊರೋನಾ ರೋಗ ಮುಕ್ತಗೊಳಿಸಿ ಹರಸುತಾಯಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸೋಮವಾರ ರಾತ್ರಿ ನಂದಾ ದೀಪಾರಾಧನೆ ಪೂಜೆ ಭಕ್ತಭಿಮಾನಿಗಳನ್ನು ಆಕರ್ಷಿಸಿತು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಆರ್.ಈ.ಸುರೇಶ್, ರಮೇಶ್, ಜಗದೀಶ್, ಶಶಿಕುಮಾರ್ ಆಚಾರ್, ದಿನೇಶ್ನಾಯಕ್, ಪ್ರವೀಣ್,ಎಪಿಎಂಸಿ ನಿರ್ದೇಶಕ ಬಂಡಿ ರಾಮಚಂದ್ರ, ನಾಗರಾಜ ಆಚಾರ್, ಎಲೆಕುಮಾರ್, ರಾಜುಭಂಡಾರಿ, ರಾಘವೇಂದ್ರ, ಶ್ರೀನಿವಾಸ್ ಆಚಾರ್, ಎನ್.ಸತೀಶ್, ಶ್ರೀನಿವಾಸ್ ಆಚಾರ್, ಸುತ್ತಮುತ್ತಲಿನ ಬಡಾವಣೆಯ ಭಕ್ತಸಮೂಹ ಪಾಲ್ಗೊಂಡಿದ್ದರು.
ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
Related