20.6 C
Shimoga
Friday, December 9, 2022

ಚೌಡೇಶ್ವರಿ ದೇವಿಯ ದೀಪೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ

ರಿಪ್ಪನ್‌ಪೇಟೆ: ಇಲ್ಲಿನ ಬರುವೆ ಚೌಡೇಶ್ವರಿ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವ ವಿಶೇಷ ಪೂಜಾ ಕಾರ್ಯದಲ್ಲಿ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು ಭಾಗವಹಿಸಿ ಪೂಜೆ ಸಲ್ಲಿಸಿದರು.


ದೇವಸ್ಥಾನದ ಜೀರ್ಣೋದ್ದಾರಕ್ಕೆ ಸರ್ಕಾರದಿಂದ ಮೂರು ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದ್ದು ದೇವಸ್ಥಾನದ ಗರ್ಭಗುಡಿಯಲ್ಲಿನ ದೇವಿಯ ವಿಸರ್ಜನಾ ನಂತರ ಕಾಮಗಾರಿ ಆರಂಭವಾಗಬೇಕಾಗಿದ್ದು ಕಾರ್ತಿಕಾ ಮಾಸವಾಗಿರುವುದರಿಂದ ಕಾಮಗಾರಿ ವಿಳಂಬಗೊಂಡಿದೆ ಎಂದು ಶಾಸಕ ಹರತಾಳು ಹಾಲಪ್ಪ ವಿವರಿಸಿ ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಉಳಿದ ಕಾಮಗಾರಿ ಪೂರ್ಣಗೊಳಿಸುವಂತೆ ದೇವಸ್ಥಾನ ಸೇವಾ ಸಮಿತಿಯವರಿಗೆ ಸೂಚಿಸಿದರು.


ನಂತರ ದೇವಸ್ಥಾನ ಸಮಿತಿಯವರ ಸನ್ಮಾನ ಸ್ವೀಕರಿಸಿ ಅನುದಾನದ ಕೊರತೆ ಎದುರಾದರೆ ಇನ್ನೂ ಹೆಚ್ಚಿನ ಅನುದಾನ ಕೊಡಿಸುವ ಭರವೆ ನೀಡಿ ಸುಸಜ್ಜಿತ ಕಟ್ಟಡ ನಿರ್ಮಿಸುವುದರೊಂದಿಗೆ ಭಕ್ತರ ಅನುಕೂಲಕ್ಕೆ ಹೆಚ್ಚು ಆಸಕ್ತಿ ವಹಿಸುವಂತೆ ಸಮಿತಿಯವರಲ್ಲಿ ಸಮಾಲೋಚನೆ ನಡೆಸಿದರು.


ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಆರ್.ಈ.ಸುರೇಶ್,ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ,ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಮುಖಂಡರಾದ ಎ.ಟಿ.ನಾಗರತ್ನ, ಮಹಾಲಕ್ಷ್ಮಿ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ಪಿ.ರಮೇಶ್, ಎನ್.ಸತೀಶ್, ಆರ್.ಟಿ.ಗೋಪಾಲ, ಕೆ.ಬಿ.ಹೂವಪ್ಪ,
ರಾಮಚಂದ್ರ ಹರತಾಳು, ಶಶಿಧರ ಆಚಾರ್, ಕೇಶವ, ಶ್ರೀನಿವಾಸ್ ಆಚಾರ್, ಲಕ್ಷ್ಮಿ, ಆರ್.ವಿ.ನಿರೂಪ್, ವಿನೋಧ, ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ಮೆಣಸೆ ಆನಂದ ಇನ್ನಿತರ ಹಲವರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!