ಛಲ ಇದ್ದರೆ ಗುರಿ ತಲುಪಲು ಸಾಧ್ಯ ; ಡಾ|| ಕೃಷ್ಣ ಎಸ್ ಭಟ್

0
262

ಹೊಸನಗರ: ಛಲ ಇದ್ದರೇ ವಿದ್ಯಾರ್ಥಿಗಳಿಂದ ಹಿಡಿದು 60 ವರ್ಷ ದಾಟಿದವರೂ ಗುರಿ ಮುಟ್ಟ ಬಹುದು ಆದರೆ ಯಾವುದೇ ಕೆಲಸ ಮಾಡಲು ಮುಂದಾಲೋಚನೆ ಹಾಗೂ ಗುರಿಯಿಲ್ಲದ್ದಿದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಭದ್ರಾವತಿಯ ನಿವೃತ್ತ ವೈದ್ಯಾಧಿಕಾರಿ ಡಾ|| ಕೃಷ್ಣ ಎಸ್. ಭಟ್‌ರವರು ಹೇಳಿದರು.

ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹೈಸ್ಕೂಲ್ ವಿಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಗೆಲ್ಲುವುದು ಹೇಗೆ ಎಂಬ ವಿಷಯವಾಗಿ ಒಂದು ದಿನದ ವಿಶೇಷ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಛಲ ಬೇಕು ಅದು ತಾನು ಮುಂದೆ ಬೆಳೆಯುವ ಸಲುವಾಗಿ ಇರಬೇಕು ಯಾವುದೇ ಕೆಲಸವನ್ನು ಛಲದಿಂದ ಮಾಡಿದಾಗ ಮಾತ್ರ ಫಲ ಸಿಗುತ್ತದೆ. ಒಂದೆರಡು ಬಾರಿ ಸೋಲಬಹುದು ಆದರೆ ಛಲವನ್ನು ಬಿಡಬಾರದು ಆಗ ಮಾತ್ರ ತಾನು ಹಿಡಿದ ಕೆಲಸದಿಂದ ಪ್ರತಿಫಲ ಸಿಗುತ್ತದೆ ಸೋತೆನೆಂದು ಬಿಟ್ಟರೇ ಮುಂದೆ ಯಾವುದೇ ಕೆಲಸ ಮಾಡಲು ಧೈರ್ಯ ಬರುವುದಿಲ್ಲ ಶ್ರದ್ದೆ ಭಕ್ತಿ ಪೂರ್ವಕವಾಗಿ ಹಾಗೂ ತಾನು ಮಾಡುವ ಕೆಲಸದಿಂದ ತನಗೆ ಹಾಗೂ ಇನ್ನೊಬ್ಬರಿಗೂ ಅನುಕೂಲವಾಗುತ್ತದೆ ಎಂದು ಮಾಡಿದ ಕೆಲಸ ಒಂದಲ್ಲ ಒಂದು ದಿನ ಅದರ ಪ್ರತಿಫಲ ಸಿಕ್ಕೆ ಸಿಗುತ್ತದೆ ವಿದ್ಯಾರ್ಥಿಗಳ ಶ್ರದ್ಧೆ ಭಕ್ತಿಯಿಂದ ಹಾಗೂ ಛಲದಿಂದ ಓದಿದಾಗ ಖಂಡಿತ ನಿಮಗೆ ಪ್ರತಿಫಲ ಸಿಗುತ್ತದೆ ಯಾರೂ ಧೈರ್ಯ ಗೆಡದೇ ಓದಿ ಉತ್ತೀರ್ಣರಾಗಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ವಿನಾಯಕ ನಾವುಡರವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಹೊಸನಗರದ ಪಶು ಆರೋಗ್ಯ ಇಲಾಖೆಯ ನಿವೃತ್ತ ವೈದ್ಯಾಧಿಕಾರಿ ಸತ್ಯನಾರಾಯಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here