ಜಂಬಳ್ಳಿಯಲ್ಲಿ ತಲಾತಲಾಂತರದಿಂದ ಆಚರಿಸುವ ಆರಾಧ್ಯ ದೈವ ಬಂಡಿ ಅಮ್ಮನವರ ಪೂಜಾ ಮಹೋತ್ಸವ

0
582

ರಿಪ್ಪನ್‌ಪೇಟೆ: ಅನಾದಿ ಕಾಲದಿಂದಲೂ ವಿಶಿಷ್ಯವಾಗಿ ವರ್ಷಕ್ಕೆ ಒಮ್ಮೆ ಪೂಜಿಸಲ್ಪಡುವ ಜಂಬಳ್ಳಿಯ ಆರಾಧ್ಯದೈವ ಬಂಡಿ ಅಮ್ಮನವರ ಪೂಜಾ ಮಹೋತ್ಸವವು ಹುಂಚದ ಶಾಂತಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಕಲಾ ಹೋಮ ಮತ್ತು ಪೂಜಾ ಕಂಕೈರ್ಯವು ಶ್ರದ್ದಾಭಕ್ತಿಯಿಂದ ಅಪಾರ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

ಬೇಡಿದ ವರ ಕರುಣಿಸುವ ಬಂಡಿಯಮ್ಮ ದೇವಿ ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಕಲ್ಲಿನ ಚಕ್ರದ ಬಂಡಿಯಲ್ಲಿ ದೇವಿಯನ್ನು ಪ್ರತಿಷ್ಟಾಪಿಸಿ ತಳಿರು ತೋರಣದೊಂದಿಗೆ ಹೂವಿನ ವಿಶೇಷ ಅಲಂಕಾರ ಮಾಡಿ ಮುತ್ತೈದೆಯರು ಮತ್ತು ಪುರುಷರು ಶ್ರದ್ಧಾ ಭಕ್ತಿಯಿಂದ ಪೂಜಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿ ಹರಿಕೆಯನ್ನು ಸಮರ್ಪಿಸುತ್ತಾರೆ.

ವಿವಾಹವಾಗದವರು ಮತ್ತು ಸಂತಾನವಿಲ್ಲದವರು ಬಂಡಿ ಅಮ್ಮನವರಲ್ಲಿ ಪ್ರಾರ್ಥಿಸಿದರೆ ಬರುವ ವರ್ಷದಲ್ಲಿ ವಿವಾಹ ಮತ್ತು ಸಂತಾನ ಭಾಗ್ಯವನ್ನು ದಯಪಾಲಿಸುತ್ತಾಳೆಂಬ ನಂಬಿಕೆ ಭಕ್ತರದು.

ಒಟ್ಟಾರೆಯಾಗಿ ಜಂಬಳ್ಳಿಯ ಬಂಡಿಯಮ್ಮ ದೇವಿಯ ಪೂಜಾ ಮಹೋತ್ಸವಕ್ಕೆ ದೂರದೂರುಗಳಿಂದ ಭಕ್ತರು ಪಾಲ್ಗೊಂಡು ಪೂಜಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇಲ್ಲಿನ ದೇವಿಯ ವಿಶೇಷತೆಗೆ ಸಾಕ್ಷಿಯಾಗಿದೆ.

ಜಂಬಳ್ಳಿಯ ಜೆ.ಎಂ.ಶಾಂತಕುಮಾರ್, ಗಾಯಿತ್ರಿ ಮುರುಗೇಂದ್ರಪ್ಪಗೌಡ, ಐಶ್ವರ್ಯ, ಸುಧಾಂಶ, ಡಾ.ಶಶಿಕುಮಾರ್‌ ಶಿವಮೊಗ್ಗ, ಕಮಲಾಕ್ಷ, ರಾಜು ಹುಗುಡಿ, ಇಂದ್ರಮ್ಮ, ವಸಂತಮ್ಮ, ಶಿವಾನಂದಪ್ಪಗೌಡ, ಗೌರಮ್ಮ, ಅಶೋಕ ಬೆನವಳ್ಳಿ, ಸುಮಿತ್ರಮ್ಮ, ಯಶೋಧಮ್ಮ, ನಾಗವೇಣಮ್ಮ, ಶಿವಲಿಂಗೇಶ್ವರ, ಹೆಚ್.ಎಂ.ಚಂದ್ರಕಾಂತ ಹುಗುಡಿ, ಭುವನಚಂದ್ರ, ಜಯಪ್ರಕಾಶ್, ಲಾಲುಪ್ರಸಾದ್, ಜೆ.ಜಿ.ಸದಾನಂದ ಜಂಬಳ್ಳಿ, ನಾಗಭೂಷಣ, ಈಶ್ವರಪ್ಪ, ತೀರ್ಥಹಳ್ಳಿಯ ಜಯದೇವ, ಸತೀಶ್ ಸೇರಿದಂತೆ ಹಲವು ಭಕ್ತರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here