23.2 C
Shimoga
Sunday, November 27, 2022

ಜಗನ್ಮಾತೆ ಪದ್ಮಾವತಿ ದೇವಿಗೆ ಬೆಳ್ಳಿ ಮಂಟಪ ಸಮರ್ಪಣೆ | ಕಾರ್ತಿಕ ದೀಪೋತ್ಸವ ಬೆಡಗು ;
“ಯಶಸ್ವಿ ಜೀವನಕ್ಕಾಗಿ ಧರ್ಮವೆಂಬ ದೀಪ”



ರಿಪ್ಪನ್‌ಪೇಟೆ: ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ನ. 13ರ ಲಕ್ಷದೀಪೋತ್ಸವದ ಸುಸಂದರ್ಭದಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಬೆಳ್ಳಿಯ ಮಂಟಪವನ್ನು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಸಮರ್ಪಿಸಲಾಯಿತು.


ಈ ಶುಭ ಸಂದರ್ಭದಲ್ಲಿ ಬೆಳ್ಳಿಯ ಮಂಟಪದ ದಾನಿಗಳಾದ ಬೆಳಗಾವಿಯ ಶ್ರೀ ನೇಮಿನಾಥ ತೂಕಪ್ಪ ಇಂಗಳೆ, ವರ್ಧಮಾನ ಇಂಗಳೆ, ಶಿವಮೊಗ್ಗದ ಶೀಲಾ ಶ್ರೀ ಶಿರಸಪ್ಪ ಗೋಗಿ, ಬೆಳಗಾವಿಯ ಪ್ರೇಮಲತಾ ನೇಮಿನಾಥ ಇಂಗಳೆ, ವಾಣಿ ವರ್ಧಮಾನ ಇಂಗಳೆ ಉಪಸ್ಥಿತರಿದ್ದರು.

ಕಾರ್ತಿಕ ದೀಪೋತ್ಸವ ಬೆಡಗು |
“ಯಶಸ್ವಿ ಜೀವನಕ್ಕಾಗಿ ಧರ್ಮವೆಂಬ ದೀಪ”

ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಕಾರ್ತಿಕಮಾಸದ ಲಕ್ಷದೀಪೋತ್ಸವವು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಸಾನಿಧ್ಯದಲ್ಲಿ ನ. 13ರಂದು ಸಾಂಗವಾಗಿ ಜರುಗಿತು. ಮಠದ ಸುತ್ತಮುತ್ತಲಿನ ಎಲ್ಲಾ ಪರಿಸರವು ಬೆಳಕಿನದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.


ಪ್ರತಿಯೋರ್ವರ ಜೀವನದ ಯಶಸ್ಸಿಗೆ ಧರ್ಮವೆಂಬ ದೀಪವು ದಾರಿದೀಪವಾಗಿದೆ. ದೀಪೋತ್ಸವ ಆಚರಣೆಯು ಧಾರ್ಮಿಕ ಮಹತ್ವವಷ್ಟೇ ಅಲ್ಲ. ಕತ್ತಲಿನಿಂದ ಬೆಳಕಿನತ್ತ ಜ್ಞಾನವೆಂಬ ಪ್ರಭೆಯನ್ನು ಪ್ರಜ್ವಲಿಸುವ ಸಂದೇಶವನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಹೊಂಬುಜದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಾನದಲ್ಲಿ ಲಕ್ಷದೀಪೋತ್ಸವದ ಸಂದರ್ಭದಲ್ಲಿ ತಿಳಿಸಿದರು.

ಶಿವಮೊಗ್ಗದ ಶಿರಸಪ್ಪ ಗೋಗಿ, ವಳಗೆರೆ ಪಾರ್ಶ್ವನಾಥ, ಡಿ.ಆರ್. ಅಂಗಡಿ, ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಮಗದಮ್ಮ, ಹೊಂಬುಜ ಶ್ರಾವಕ ಶ್ರಾವಿಕೆಯರು ಗ್ರಾಮಸ್ಥರು ಶ್ರೀಗಳವರಿಗೆ ಶ್ರೀಫಲ ಸಮರ್ಪಿಸಿದರು. ನಂತರ ರಾಜಬೀದಿಯಲ್ಲಿ ಪಲಕ್ಕಿ ಉತ್ಸವ ನಡೆಯಿತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!