20.6 C
Shimoga
Friday, December 9, 2022

ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿದ ತೀರ್ಪು ಅಂತಿಮ ; ನ್ಯಾಯಾಧೀಶ ರವಿಕುಮಾರ್


ಹೊಸನಗರ: ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿದ ತೀರ್ಪು ಅಂತಿಮವಾಗಿದ್ದು ಇದು ನ್ಯಾಯಾಲಯದ ತೀರ್ಪುಗಳಿಗಿಂತ ಹೆಚ್ಚಿನ ಮಹತ್ವ ಪಡೆದಿರುತ್ತದೆ ಎಂದು ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಕೆಯವರು ಹೇಳಿದರು.


ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಲಯದ ಆವರಣದಲ್ಲಿ ಜನತಾ ನ್ಯಾಯಾಲಯಕ್ಕೆ ಬಂದ 468 ಹಾಗೂ ಹೆಚ್ಚುವರಿ ನ್ಯಾಯಾಲಯದ 233 ಕೇಸುಗಳನ್ನು ಇತ್ಯರ್ಥ ಪಡಿಸಿ ಮಾತನಾಡಿದರು.


ಹೊಸನಗರದ ಪ್ರದಾನ ನ್ಯಾಯಾಲಯದಲ್ಲಿ 587 ಕೇಸ್ ಗಳಲ್ಲಿ 486 ಕೇಸ್ ಗಳನ್ನು ಇತ್ಯರ್ಥ ಪಡಿಸಿ 7,62,074 ರೂ. ಹಾಗೂ ಇದೇ ಹೆಚ್ಚುವರಿ ನ್ಯಾಯಾಲಯದ 284ಕೇಸ್ ಗಳಲ್ಲಿ 233 ಕೇಸ್ ಗಳನ್ನು ಇತ್ಯರ್ಥ ಪಡಿಸುವುದರ ಜೊತೆಗೆ 21,71,545 ರೂಪಾಯಿಗಳನ್ನು ವಾರಸುದಾರರಿಗೆ ನೀಡಿದರು.


ಜನತಾ ನ್ಯಾಯಾಲಯ ನೀಡಿದ ತೀರ್ಪು ಅಂತಿಮವಾಗಿದ್ದು ಅದರ ವಿರುದ್ಧ ಮೇಲ್ಮನವಿಗೆ ಅವಕಾಶವಿಲ್ಲ ಮತ್ತು ಅದು ಇಬ್ಬರಿಗೂ ಬಂಧನಕಾರಿಯಾಗಿರುತ್ತದೆಯಲ್ಲದೇ ಸಿವಿಲ್ ನ್ಯಾಯಾಲಯದ ತೀರ್ಪಿನಷ್ಟೆ ಮಾನ್ಯವಾಗಿರುತ್ತದೆ
ಈ ಜನತಾ ನ್ಯಾಯಾಲಯದ ಮೂಲಕ ಮೋಟಾರು ವಾಹನ ಅಪಘಾತಗಳಲ್ಲಿ ಗಾಯಗೊಂಡವರು ಅಥವಾ ಮೃತಪಟ್ಟವರ ವಾರಸುದಾರರು ಅಥವಾ ಅವಲಂಬಿತರು ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದಾಗಿದ್ದು ಭೂ ಸ್ವಾಧೀನ ಸಂಬಂಧ ಸರ್ಕಾರದಿಂದ ಪರಿಹಾರ ಕೋರಿ ಸಲ್ಲಿಸಲಾದ ಪ್ರಕರಣಗಳನ್ನು ಪುರಸಭೆ, ಪಂಚಾಯಿತಿ, ವಿದ್ಯುತ್ ಮಂಡಳಿ ಮುಂತಾದ ಸ್ಥಳೀಯ ಸಮಸ್ಯೆಗಳ ಪರ ಮತ್ತು ವಿರುದ್ಧ ದಾಖಲಾದ ಪ್ರಕರಣಗಳನ್ನು ಬ್ಯಾಂಕ್‌ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳನ್ನು ಕಾನೂನಿನ ಅನ್ವಯ ರಾಜೀ ಆಗಬಹುದಾದ ಕ್ರಿಮಿನಲ್ ಮೊಕದ್ದಮೆಗಳನ್ನು ಕಾರ್ಮಿಕ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಹಾಗೂ ಚೆಕ್ ಕೇಸ್ ಗಳನ್ನು ಜನತಾ ನ್ಯಾಯಾಲಯದ ಮೊರೆ ಹೋಗಬಹುದು ನ್ಯಾಯಾಲಯದಲ್ಲಿರುವ ಇತ್ಯರ್ಥ ಪಡಿಸಲು ಸಾದ್ಯವಾಗುವಂತಹ ಕೇಸುಗಳನ್ನು ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥ ಪಡಿಸಿಕೊಂಡರೆ ಸಮಯದ ಜೊತೆಗೆ ಸಹಬಾಳ್ವೆಯಿಂದ ಎಲ್ಲರೂ ಬಾಳ್ವೆ ನಡೆಸಲು ಸಾಧ್ಯವಾಗಲಿದ್ದು ಎಲ್ಲರೂ ಜನತಾ ನ್ಯಾಯಾಲಯದ ಮೂಲಕ ತಮ್ಮಲ್ಲಿರುವ ಕೇಸುಗಳನ್ನು ಇತ್ಯರ್ಥ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಷಣ್ಮುಖಪ್ಪ, ಹಿರಿಯಪ್ಪ, ವಾಲೆಮನೆ ಶಿವಕುಮಾರ್, ವೈ. ಪಿ. ಮಹೇಶ್, ಕೆ.ಎಸ್.ವಿನಾಯಕ, ಗುರುಕಿರಣ್, ಬಸವರಾಜ್ ಗಗ್ಗ, ವಿಜಯ್ ಹೊಳ್ಳಗದ್ದೆ, ಚಂದ್ರಪ್ಪ, ಈರಪ್ಪ, ಶಿವಾನಂದಪ್ಪ, ಮಂಡಾಣಿ ಗುರು, ಅಮೃತ್, ಕರ್ಣಕುಮಾರ್, ಸುರೇಶ್, ಮೋಹನ್ ಶೆಟ್ಟಿ, ಮಹಾದೇವಪ್ಪ ಗೌಡ, ರೇಖಾ ಹರೀಶ್ ಇನ್ನೂ ಮುಂತಾದ ವಕೀಲರು ಹಾಗೂ ಕಕ್ಷಿದಾರರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!