ಜನಪ್ರತಿನಿಧಿಗಳಿಗೆ ಅಡ್ಡಿಯಾದ ಪರಿಷತ್ ಚುನಾವಣಾ ನೀತಿ ಸಂಹಿತೆ !

0
280

ರಿಪ್ಪನ್‌ಪೇಟೆ: ಕಲಾಕೌಸ್ತುಭ ಕನ್ನಡ ಸಂಘದ 28ನೇ ವರ್ಷದ ವಾರ್ಷಿಕೋತ್ಸವ ಮತ್ತು 66ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದ ಸಂಸದರು ಮತ್ತು ಶಾಸಕರನ್ನು ಆಹ್ವಾನಿಸಲು ಪರಿಷತ್ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದ್ದು ರಾಜ್ಯೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಯಿತು.

ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಉಮಾ ಸುರೇಶ್ ಅಧ್ಯಕ್ಷತೆಯಲ್ಲಿ ಸಭೆ ಸೇರಿ ನವೆಂಬರ್ 27-28 ರಂದು ಆಚರಿಸಬೇಕಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯಲ್ಲಿ ಅತಿಥಿಗಳ ಅಹ್ವಾನಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆದು ಕೊನೆಗೆ ಶಾಲಾ-ಕಾಲೇಜ್ ವಿದ್ಯಾರ್ಥಿಗಳ ಮೆರವಣಿಗೆಗೆ ಹೆಚ್ಚು ಜನರನ್ನು ಸೇರಿಸಬಾರದು ಎಂದು ಕಟ್ಟುನಿಟ್ಟಿನ ಆದೇಶವಿದೆ, ಆ ಕಾರಣ ಕಾರ್ಯಕ್ರಮ ನಡೆಸುವುದಾದರೂ ಹೇಗೆ? ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದಾಗ ಪರಿಷತ್ ಚುನಾವಣೆಯ ನಂತರದಲ್ಲಿ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡುವಂತೆ ಹಲವರು ತಮ್ಮ ಅಭಿಪ್ರಾಯ ಪಡುವಾಗ ತಕ್ಷಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳಿಗೆ ಮುಂದೆ ಹಾಕಲಾಯಿತು.

ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪನವರನ್ನು ಆಹ್ವಾನಿಸಬೇಕು, ಇನ್ನೂ ಕೆಲವರು ಮಾಜಿ ಶಾಸಕ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ರವರನ್ನು ಆಹ್ವಾನಿಸಬೇಕು ಎಂಬ ಕುರಿತು ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದು ಕೊನೆ ಘಳಿಗೆಯಲ್ಲಿ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವ ನಿರಂತರ ರಾಜ್ಯೋತ್ಸವವಾಗಿ ಡಿಸೆಂಬರ್‌ಗೆ ಮುಂದೂಡಿದರು.

ಆರ್.ಎ.ಚಾಬುಸಾಬ್, ಟಿ.ಆರ್.ಕೃಷ್ಣಪ್ಪ, ಎಂ. ಸುರೇಶ್‌ಸಿಂಗ್, ಎಂ.ಬಿ. ಮಂಜುನಾಥ, ಶ್ರೀಧರ್, ನಾಗರತ್ನ ದೇವರಾಜ್, ಪದ್ಮಾ ಸುರೇಶ್, ಶೈಲಾ ಆರ್.ಪ್ರಭು, ಆರ್.ಡಿ.ಶೀಲಾ, ಮೂಕಾಂಬಿಕಾ, ಲಕ್ಷ್ಮಿ ಶ್ರೀನಿವಾಸ್ ಆಚಾರ್, ಹಿರಿಯಣ್ಣ ಭಂಡಾರಿ, ರಾಘವೇಂದ್ರ ಆಚಾರ್, ಆರ್.ರಾಘವೇಂದ್ರ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here