ಹೊಸನಗರ : ರಾಜ್ಯದಲ್ಲೇ ಅತಿ ಹಿಂದುಳಿದ ತಾಲೂಕು ಜಾತಿಗೆ ಪಾತ್ರವಾದ ಹೊಸನಗರ ತಾಲೂಕು ಕೇಂದ್ರ ಇಬ್ಬರು ಶಾಸಕರನ್ನು ಹೊಂದಿದ್ದರೂ ಅಭಿವೃದ್ಧಿ ನಿಟ್ಟಿನಲ್ಲಿ ಜೀರೋ ಎನಿಸಿದೆಕೊಂಡಿದೆ.
ಪಟ್ಟಣದಲ್ಲಿರುವ 100 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್, ನಗು-ಮಗು, ಜನೌಷಧಿ ಕೇಂದ್ರ ಹಾಗೂ ವೈದ್ಯರುಗಳ ಸೇವೆ ಕಳೆದ ಒಂದು ವರ್ಷದಿಂದ ಲಭ್ಯವಾಗದೆ ಜನ ಪರದಾಡುವಂತಾಗಿದೆ.

ಹೊಸನಗರ ತಾಲೂಕಿನ 4 ಹೋಬಳಿಗಳಲ್ಲಿ ತಲಾ ಎರಡು ಹೋಬಳಿಗಳನ್ನು ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕರುಗಳು ಬಳುವಳಿ ಪಡೆದುಕೊಂಡಿದ್ದು ಈ ಭಾಗದ ಅಭಿವೃದ್ಧಿ ಹಣ ಅವರುಗಳ ಕ್ಷೇತ್ರಕ್ಕೆ ಬಳಕೆಯಾಗುತ್ತಿರುವ ಕಾರಣ ಹೊಸನಗರ ತಾಲೂಕಿನ ಹಿಂದುಳಿದ ಪ್ರದೇಶಗಳು ಅಭಿವೃದ್ಧಿ ಕಾಣದಾಗಿದೆ.
100 ಹಾಸಿಗೆ ಸಾಮರ್ಥ್ಯದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಾಗಿ ಆವರಣ ಗೋಡೆ ನಿರ್ಮಾಣ ಮಾಡಬೇಕಾಗಿತ್ತು ಇದು ಕೂಡ ನೆನೆಗುದಿಗೆ ಬಿದ್ದಿದೆ.
