23.2 C
Shimoga
Sunday, November 27, 2022

ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದು ; ಜಡೆ ಸಂಸ್ಥಾನದ ಮಹಾಂತ ಸ್ವಾಮೀಜಿ

ಸೊರಬ: ಕಾಲ ಕಾಲಕ್ಕೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಕೊಡುಗೆಯೂ ಇದೆ ಎಂದು ಜಡೆ ಸಂಸ್ಥಾನದ ಮಹಾಂತ ಸ್ವಾಮೀಜಿ ಹೇಳಿದರು.

ಸೊರಬದ ರಂಗಮಂದಿರದಲ್ಲಿ ಗುರುವಾರ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸೊರಬ ಪ್ರೆಸ್‌ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ನೆರವೇರಿಸಿ ಮಾತನಾಡಿದರು.

ಪತ್ರಕರ್ತರಿಗೆ ನೈತಿಕತೆಯೂ ಮುಖ್ಯ. ಪತ್ರಕರ್ತರೂ ಸಹ ಕೆಲವು ಜವಾಬ್ದಾರಿಯನ್ನು ಹೊಂದಿದ್ದಾಾರೆ. ಸತ್ಯ ಸಂಗತಿಗಳನ್ನು ಹುಡುಕು ತೆಗೆಯುವ ಕೆಲಸವಾಗಬೇಕಿದೆ. ಜನರಿಗೆ ಸುದ್ದಿ, ತಲುಪಿಸುವ ಮತ್ತು ಸಮಸ್ಯೆ ಬೆಳಕು ಚೆಲ್ಲುವ ಕೆಲಸಕ್ಕೆ ಮಠ ಬೆಂಬಲ ಇದ್ದೆ ಇದೆ. ಸೊರಬದಲ್ಲಿ ಪತ್ರಿಕಾ ಭವನ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಪತ್ರಕರ್ತ ವಿನಾಯಕ ಭಟ್ ಮೂರೂರು, ಪತ್ರಿಕೋದ್ಯಮ ಸವಾಲಿನ ಕೆಲಸ ಎಲ್ಲ ಕಾಲಘಟ್ಟದಲ್ಲಿದೆ. ಆದರೆ, ಇತ್ತೀಚೆಗೆ ನಾವೇ ಮೊದಲು ಎಂಬ ಧಾವಂತದಲ್ಲಿ ತಪ್ಪು ಸಂದೇಶವನ್ನು ಸಾರುವ ಕೆಲಸ ವಾಡಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರ ಚಾರಿತ್ರ್ಯ ಹರಣ ಆಗುತಿದೆ. ಸಿದ್ಧಾಂತ ಸಂಘರ್ಷದಲ್ಲಿ ಬ್ರಾಂಡ್ ಮಾಡೊ ಅಪಾಯ ಇದೆ. ಟೀಕೆ ಸಹಿಸುವ ಕಾಲ ಇದಲ್ಲ, ಈಗ ಟೀಕೆಯನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಜನ ಕಡಿಮೆ. ಪತ್ರಕರ್ತರು ಒತ್ತಡ ಮತ್ತು ಬೆದರಿಕೆ ನಡುವೆ ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದರು.

ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುದ್ದಿಗಳಿಗೆ ವಿಶ್ವಾಸಾರ್ಹತೆ ಇಲ್ಲ. ಆದರೆ, ವಿಶ್ವಾಸಗಳಿಸಿರುವ ಮುದ್ರಣ ಮಾಧ್ಯಮ ಇಂದು ಅಲಕ್ಷತೆಗೊಳಗಾಗುತ್ತಿದೆ. ಮುದ್ರಣ ಮಾಧ್ಯಮಗಳು ಸಾಮಾಜಿಕ ಮಾಧ್ಯಮಗಳನ್ನು ಅವಲಂಭಿಸುತ್ತಿವೆ. ಇದು ಆಗಬಾರದು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿ, ಬೌದ್ದಿಕ ಸುಸ್ತಿರತೆ ,ಆರ್ಥಿಕ ಸುಸ್ತಿರತೆ, ಪತ್ರಕರ್ತರಿಗೆ ಅಗತ್ಯ. ಜೊತೆಗೆ ಆರೋಗ್ಯ ಬಹುಮುಖ್ಯ ಆದ್ದರಿಂದ ಇಂದು ಸಂಘದಿಂದ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ಸರ್ವೋತೋಮುಖ ಅಭಿವೃದ್ಧಿಗೆ ಸಂಘ ಶ್ರಮಿಸಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಹಾಗೂ ಮಾಸಾಶನ ಸಮಿತಿ ಸದಸ್ಯ ಎನ್.ಮಂಜುನಾಥ್ ಮಾತನಾಡಿ, ಪತ್ರಿಕಾ ಸಂಘಟನೆಗಳಲ್ಲಿ ಬರೆಯದ ಪತ್ರಕರ್ತರು ಸೇರಿಕೊಂಡು ಸಮಾಜಕ್ಕೆ , ಕೆಟ್ಟ ಸಂದೇಶ ನೀಡುತ್ತಿದ್ದಾರೆ. ಹೀಗಾಗಿ ಪೀತ ಪತ್ರಿಕೋದ್ಯಮ ದೂರ ಇಡಲು ನೈಜ ಪತ್ರಕರ್ತ ಸಕ್ರಿಯರಾಗಿ ಸಂಘಟನೆ ಮಾಡಲಾಗಿದೆ. ಸಜ್ಜನರು ಪೀತ ಪತ್ರಕರ್ತರಿಗೆ ಹೆದರುವ ಅಗತ್ಯ ಇಲ್ಲ. ಪತ್ರಕರ್ತರ ಶ್ರೇಯೋಭಿವೃದ್ದಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ ಕೆಲಸ ಮಾಡುತ್ತಿದೆ. ಒಳ್ಳೆ ಪತ್ರಿಕೋದ್ಯಮ ಇಂದಿನ ಅಗತ್ಯ ಎಂದರು.

ವೀರೇಶ್ ಮೇಸ್ತ್ರಿ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕಿದೆ. ಖಡ್ಗಕ್ಕಿಂತ ಲೇಖನಿ ಹರಿತ. ಮಾಧ್ಯಮ ಕ್ಷೇತ್ರ ಶ್ರೇಷ್ಠವಾದದ್ದು, ಅದಕ್ಕೆ ಅನುಗುಣವಾಗಿ ಕೆಲಸ ಮಾಡುವ ಮಂದಿಗೆ ಗೌರವ ಇದೆ ಎಂದರು.

ಬಾಸೂರು ಚಂದ್ರೇಗೌಡ ಮಾತನಾಡಿ, ಯಾವುದೇ ಸಂಘಟನೆಗಳಿಗೆ ಸಂಖ್ಯೆ ಮುಖ್ಯ ಅಲ್ಲ. ಗುಣ ಮಟ್ಟ ಮುಖ್ಯ. ಪ್ರತಿಯೊಬ್ಬರೂ ಮನುಷ್ಯರಾಗಬೇಕು. ಅರಿತೂ ತಪ್ಪು ಮಾಡಬಾರದು. ಪತ್ರಕರ್ತರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಎಸ್.ಜಿ .ರಾಮಚಂದ್ರ ಪ್ರಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ .ಶೇಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಉಪಾಧ್ಯಕ್ಷ ಎಸ್.ಜಿ.ರಾಮಚಂದ್ರ, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಜೇಸುದಾಸ್, ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಅಧ್ಯಕ್ಷ ಡಿ.ರಾಘವೇಂದ್ರ, ಉಪಾಧ್ಯಕ್ಷ ಮಹೇಶ್ ಗೋಖಲೆ, ಪ್ರಧಾನ ಕಾರ್ಯದರ್ಶಿ ದಿನಕರ ಭಟ್ ಭಾವೆ, ಖಜಾಂಚಿ ಹೆಚ್.ಕೆ.ಬಿ.ಸ್ವಾಮಿ ಮತ್ತಿತರರು ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!