ಜನಸ್ವರಾಜ್ ರಾಜ್ಯಮಟ್ಟದ ಯಾತ್ರೆ ನಗರದಲ್ಲಿ ಉದ್ಘಾಟನೆ

0
208

ಚಿಕ್ಕಮಗಳೂರು: ಬಿಜೆಪಿ ರಾಜ್ಯಮಟ್ಟದಲ್ಲಿ ಹಮ್ಮಿಕೊಂಡಿರುವ ಜನಸ್ವರಾಜ್ ಯಾತ್ರೆ ನವೆಂಬರ್ 18 ರಂದು ಚಿಕ್ಕಮಗಳೂರು ನಗರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾವಕ್ತಾರ ವರಸಿದ್ದಿವೇಣುಗೋಪಾಲ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ, ಒಟ್ಟು ನಾಲ್ಕು ತಂಡಗಳು ರಾಜ್ಯಾದ್ಯಂತ ಸಂಚರಿಸಲಿದ್ದು, ಅದರಲ್ಲಿ 3ನೇ ತಂಡದ ನೇತೃತ್ವವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ವಹಿಸುತ್ತಿದ್ದು, ನ. 18ರಿಂದ 22ರವರೆಗೆ ಯಾತ್ರೆ ಸಾಗಲಿದೆ ಎಂದು ಹೇಳಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಜನಸ್ವರಾಜ್ ಸಮಾವೇಶ ಉದ್ಘಾಟನೆಗೊಳ್ಳುತ್ತಿದ್ದು, ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ, ಕೇಂದ್ರಸಚಿವೆ ಶೋಭಾಕರಂದ್ಲಾಜೆ, ಸಚಿವರಾದ ಆರ್. ಅಶೋಕ್, ಎಸ್. ಟಿ. ಸೋಮಶೇಖರ್, ಹಾಲಪ್ಪ ಆಚಾರ್, ಎಸ್. ಅಂಗಾರ, ಮಾಜಿ ಸಚಿವ ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ಶಂಕರಪ್ಪ ಇದ್ದಾರೆಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ, ವಿಧಾನಪರಿಷತ್ ಮಾಜಿ ಉಪಸಭಾಪತಿ ಎಂ. ಕೆ. ಪ್ರಾಣೇಶ್, ಶಾಸಕರಾದ ಎಂ. ಪಿ. ಕುಮಾರಸ್ವಾಮಿ, ಡಿಸಿಸಿಬ್ಯಾಂಕ್ ಅಧ್ಯಕ್ಷ ಡಿ. ಎಸ್. ಸುರೇಶ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ. ಎನ್. ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್. ಸಿ. ಕಲ್ಮರಡಪ್ಪ, ಜಿ. ಪಂ. , ತಾ. ಪಂ. ನಗರಸಭೆ ಮಾಜಿ ಸದಸ್ಯರು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮೊದಲನೇ ತಂಡದ ನೇತೃತ್ವವಹಿಸಿದರೆ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2ನೇ ತಂಡದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ನಾಲ್ಕನೇ ತಂಡದ ನೇತೃತ್ವವಹಿಸಿದ್ದಾರೆ. ಯಾತ್ರೆ ಸಂಚಾಲಕರಾಗಿ ಬಿಜೆಪಿ ರಾಜ್ಯ ಪ್ರದಾನಕಾರ್ಯದರ್ಶಿ ಅಶ್ವಥ್‌ನಾರಾಯಣ, ಸಹಸಂಚಾಲಕರಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ ಕಾರ್ಯನಿರ್ವಹಿಸಲಿದ್ದಾರೆಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿ. ಆರ್. ಪ್ರೇಂಕುಮಾರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರಕಾರ್ಯಕ್ರಮಗಳು, ಭ್ರಷ್ಟಾಚಾರರಹಿತ, ಉತ್ತಮ ಆಡಳಿತವನ್ನು ಜನರಿಗೆ ತಿಳಿಸಿಕೊಡುವುದೇ ಜನಸ್ವರಾಜ್ ಯಾತ್ರೆಯ ಮುಖ್ಯಉದ್ದೇಶವೆಂದು ಹೇಳಿದರು.

ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ 1421 ಮಂದಿ ಗ್ರಾಮಪಂಚಾಯಿತಿ ಸದಸ್ಯರು ಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆಂದರು. ಜಿಲ್ಲಾಮಾಧ್ಯಮ ಪ್ರಮುಖ್ ಡಿ. ಸುಧೀರ್, ನಗರ ಅಧ್ಯಕ್ಷ ಮಧುಕುಮಾರ್‌ರಾಜ್ ಅರಸ್, ಯುವಮೋರ್ಚಾದ ಸಚಿನ್, ಕೌಶಿಕ್ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here