ಜಮೀನಿಗೆ ಹೋಗುವ ರಸ್ತೆಗಾಗಿ ಆಗ್ರಹಿಸಿ ನಾಡಕಛೇರಿ ಎದುರು ಪ್ರತಿಭಟನೆ

0
822

ರಿಪ್ಪನ್‌ಪೇಟೆ: ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಂಚನಾಲ ಗ್ರಾಮದ ಸರ್ವೇ ನಂಬರ್ 35 ರಲ್ಲಿನ ಜಮೀನಿಗೆ ಓಡಾಡಲು ರಸ್ತೆ ಬಂದ್ ಮಾಡಿದ್ದಾರೆಂದು ಆರೋಪಿಸಿ ಹೋಬಳಿ ಕಛೇರಿಯ ಎದುರು ಜಮೀನು ಮಾಲೀಕ ಸೋಮಶೇಖರ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಕಳೆದ ಎರಡು ಮೂರು ವರ್ಷಗಳಿಂದ ನಮ್ಮ ಜಮೀನಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದಾರೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಾಗರ ಉಪವಿಭಾಗಾಧಿಕಾರಿಗಳಿಗೆ ಹಾಗೂ ಹೊಸನಗರ ತಹಶೀಲ್ದಾರ್ ರವರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ನಾವು ಜಮೀನು ಸಾಗುವಳಿ ಮಾಡದೇ ಹಾಗೆಯೆ ಬೀಳು ಬಿಟ್ಟಿರುತ್ತೇವೆಂದು ಹೇಳಿ, ಬೇರೆ ಮಾರ್ಗವಿಲ್ಲದೆ ನಾಡಕಛೇರಿಯ ಎದುರು ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಂಡಿರುತ್ತೇವೆಂದು ರೈತ ಸೋಮಶೇಖರ್ ವಿವರಿಸಿದರು.

ನಾಡಕಛೇರಿಯ ಉಪತಹಶೀಲ್ದಾರ್ ತಕ್ಷಣ ತಹಶೀಲ್ದಾರ್ ಗಮನಕ್ಕೆ ತರುತ್ತಿದ್ದಂತೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿ ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ಪರಿಣಾಮ ಪ್ರತಿಭಟನೆಯನ್ನು ಕೈಬಿಡಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here