ಜಮೀನು ವಿವಾದ: ಸೋದರನಿಂದಲೇ ಅಣ್ಣನ ಕೈ,ಕಾಲು ಮುರಿತ..! ಠಾಣೆಯಲ್ಲಿ ದೂರು ದಾಖಲು..!!

0
1438

ರಿಪ್ಪನ್‌ಪೇಟೆ: ಸಮೀಪದ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಆಕಾಶಮಕ್ಕಿ ನಿವಾಸಿ ಶೇಷಪ್ಪ ಮತ್ತು ತಮ್ಮ ವಾಸಪ್ಪ ಎಂಬುವರ ಮಧ್ಯೆ ಜಮೀನಿ ವಿವಾದ ನಡೆದು ಪರಸ್ಪರ ಕೈ-ಕೈ ಮಿಲಾಯಿಸಿ ನಂತರ ತಮ್ಮ ಅಣ್ಣನ ಕೈಕಾಲು ಮುರಿದ ಬಗ್ಗೆ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಂದೇ ಕುಟುಂಬದವರಾದ ಇವರು ಜಮೀನು ಹಂಚಿಕೆ ವಿಚಾರದಲ್ಲಿ ವಾದ-ವಿವಾದ ನಡೆದು ಕೊನೆಗೆ ಗಲಾಟೆಗೆ ತಿರುಗಿದ್ದು ಅಣ್ಣ ಶೇಷಪ್ಪ ಎಂಬುವರ ಮೇಲೆ ತಮ್ಮ ವಾಸಪ್ಪ, ಪತ್ನಿ ಯಶೋಧ, ಪುತ್ರ ಮನೋಜ್ ಹಾಗೂ ಪವನ್ ಎಂಬ ನಾಲ್ವರು ಏಕಾಏಕಿ ಹಲ್ಲೆ ನಡೆಸಿ ಕೈಕಾಲು ಮುರಿದ ಪ್ರಕರಣ ನಡೆದಿದ್ದು ತಕ್ಷಣ ಅಣ್ಣ ಶೇಷಪ್ಪನವರನ್ನು ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇಲ್ಕಂಡ ತಮ್ಮ ವಾಸಪ್ಪ ಕಲ್ಲುಹಳ್ಳ ಪ್ರೌಢಶಾಲೆಯ ನೌಕರನೆಂದು ಹೇಳಲಾಗಿದೆ.

ಶೇಷಪ್ಪ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎಎಸ್‌ಐ ಗಣಪತಿ ದೂರು ದಾಖಲಿಸಿಕೊಂಡು ನಾಲ್ವರ ವಿರುದ್ದ ಕೇಸ್ ದಾಖಲಿಸಿ ಬಂಧಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here