ಜಯನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

0
313

ಹೊಸನಗರ: ತಾಲೂಕು ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ರಾಮಚಂದ್ರಪುರದ ನೂರಲ್ಲ ಉದಾ ಹನಫಿ ಜುಮ್ಮಾ ಮಸೀದಿಯಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯನ್ನು ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಾರಣಾಂತಿಕ ಕೊರೊನಾ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಧರ್ಮಗುರುಗಳಾದ ಫಾರೂಕ್ ಬ್ಯಹಾರಿ ಅಬ್ದುಲ್ ಸಲಾಂ ಅವರು ಉಪನ್ಯಾಸ ನೀಡಿ ಶಾಂತಿ ಕರುಣೆಯ ಸಂದೇಶ ಸಾರಿದ ಪ್ರವಾದಿ ಮಹಮ್ಮದ್ ಪೈಗಂಬರರ ಆದೇಶಗಳನ್ನು ಅನುಸರಿಸುವಂತೆ ಮುಸ್ಲಿಂ ಬಾಂಧವರಿಗೆ ಕರೆ ನೀಡಿದರು.

ಈ ಸಮಾರಂಭದಲ್ಲಿ ಆದಿಲ್ ಶಹಬುದ್ದಿನ್ ಜಲೀಲ್ ಸಾಬ್ ಗ್ರಾಮದ ಮೊದಲಾದ ಮುಖಂಡರುಗಳು ಪಾಲ್ಗೊಳ್ಳುವ ಮೂಲಕ ಸಮಾರಂಭಕ್ಕೆ ಕಳೆ ನೀಡಿದರು

ಮಸೀದಿ ಆವರಣವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ ಸಂಗ್ರಹಿಸಲಾಗಿತ್ತು ಸಂಜೆ ಮಸೀದಿ ಆವರಣದಲ್ಲಿ ಮಳೆ ನಡುವೆಯೂ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಲಾಯಿತು.

ನೂರಲ್ಲ ಉದಾ ಹನಫಿ ಮಸೀದಿ ಸಮಿತಿಯ ಅಧ್ಯಕ್ಷ ಅಶ್ರಫ್ ಮೈದಿನ್ ಸಾಬ್ ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ನೂರಲ್ಲ ಉದಾ ಹನಫಿ ಮಸೀದಿ ಸಮಿತಿಯ ಅಧ್ಯಕ್ಷ ಅಶ್ರಫ್ ಮೈದಿನ್ ಸಾಬ್ ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ವರದಿ: ಉಡುಪಿ ಎಸ್ ಸದಾನಂದ ಹೊಸನಗರ
ಜಾಹಿರಾತು

LEAVE A REPLY

Please enter your comment!
Please enter your name here