23.2 C
Shimoga
Sunday, November 27, 2022

ಜಾನುವಾರುಗಳಿಗೆ ಹುಲ್ಲು ತರಲು ಹೋದ ಮಹಿಳೆ ಕಾಡಾನೆ ದಾಳಿಗೆ ಬಲಿ !

ಮೂಡಿಗೆರೆ: ತಾಲೂಕಿನ ಹುಲೇಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶೋಭಾ (35) ಮೃತ ದುರ್ದೈವಿಯಾಗಿದ್ದು, ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಜನರು ಆತಂಕದಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಕಾಡಾನೆಗಳು ಮನೆ ಸಮೀಪವೇ ಬರುತ್ತಿದ್ದು ಜನರು ಭಯಭೀತರಾಗಿದ್ದಾರೆ.

ಜಾನುವಾರುಗಳಿಗೆ ಹುಲ್ಲು ತರಲು ಮೂವರು ಮಹಿಳೆಯರು ಹೋದಾಗ ಇಬ್ಬರು ಪಾರಾಗಿದ್ದು ಶೋಭಾ ಎಂಬ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ್ದು ಮಹಿಳೆಯ ಶವವನ್ನು ಕಾಡಾನೆ ನಜ್ಜುಗುಜ್ಜು ಮಾಡಿದೆ. ಗ್ರಾಮಸ್ಥರು ಭಯ ಬೀತರಾಗಿದ್ದು ಹಾಡು ಹಗಲೇ ನಡೆದ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ಸಾರ್ವಜನಿಕರು ತಿಳಿಸಿದಾಗಲೇ ಅವುಗಳನ್ನು ಕಾಡಿಗಟ್ಟಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!