23.2 C
Shimoga
Sunday, November 27, 2022

ಜಾನುವಾರು ಹುಡುಕಲು ಹೋದ ವ್ಯಕ್ತಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ಸಾವು !


ಹೊಸನಗರ : ಮೇಯಲು ಬಿಟ್ಟ ಜಾನುವಾರು ಮನೆಗೆ ಬಾರದ ಕಾರಣ ಹುಡುಕಲು ಹೋದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತ ಪಟ್ಟಿರುವ ಘಟನೆ ತಾಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೇರುಪುರ ಎಂಬಲ್ಲಿ ನಡೆದಿದೆ.


ಗೇರುಪುರ ವಾಸಿ ಕೃಷಿಕ ನಾಗರಾಜ ಬಿನ್ ಗಂಗದಾಸ ಸೋಮವಾರ ತಡರಾತ್ರಿ ಜಾನುವಾರು ಹುಡುಕಲು ಹೋಗಿದ್ದರು. ಅವರು ಮನೆಗೆ ವಾಪಸ್ ಬಾರದಿದ್ದ ಹಿನ್ನಲೆ, ಮಗ ಗಿರೀಶ್ ಮತ್ತು ಸ್ನೇಹಿತರು ತಂದೆ ನಾಗರಾಜ ಅವರನ್ನು ರಾತ್ರಿಯಿಡಿ ಹುಡುಕಿದಾಗ ಅವರ ಶವ ರಾಮದಾಸ ಎಂಬುವವರ ಜಮೀನಿನ ಸಮೀಪ ಹರಿಯುವ ಹಳ್ಳದಲ್ಲಿ ಮಂಗಳವಾರ ಬೆಳಗ್ಗೆ ದೊರೆತಿದೆ.

ಮೃತರ ಪುತ್ರ ಗಿರೀಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನ.23ಕ್ಕೆ ಹೊಸನಗರದಲ್ಲಿ ಕಾರ್ತಿಕ ದೀಪೋತ್ಸವ
ಹೊಸನಗರ : ಪಟ್ಟಣದ ಶ್ರೀ ಮಹೇಶ್ವರ ಗಣಪತಿ ಮತ್ತು ಪಾರ್ವತಿ ದೇವರ ದೀಪೋತ್ಸವ ಕಾರ್ಯಕ್ರಮ ನ.23ರ ಬುಧವಾರ ನಡೆಯಲಿದೆ.

ಅಂದು ದೇವಾಯಲಯದಲ್ಲಿ ಸ್ವಾಮಿಗೆ ಷಣ್ಣಾಳಿಕೇರ ಮಹಾಗಣಪತಿ ಹವನ, ಶತರುದ್ರಾಭಿಷೇಕ, ಪ್ರರ್ಣಾಹುತಿ, ಕುಂಕುಮಾರ್ಚನೆ,ತುಳಿಸಿ ಅರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸಹಿತ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 9ಕ್ಕೆ ಸುದರ್ಶನ ವಿಜಯ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!