ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸಿದವನ ಬಂಧನ

0
5270

ಸಾಗರ: ತಾಲ್ಲೂಕಿನ ಪೊಲೀಸ್ ಮತ್ತು ಅರಣ್ಯ ಸಂಚಾರಿ ದಳ, ಸಾಗರದ ಅಧಿಕಾರಿ ಮತ್ತು ಸಿಬ್ಬಂದಿಯವರು ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿವಮೊಗ್ಗ ತಾಲೂಕು ಯರೇಕೊಪ್ಪ ವಾಸಿ ಟಿ‌. ನಾಗೇಶ್ ನಾಯ್ಕ ಬಿನ್ ಟೀಕ್ಯಾನಾಯ್ಕ ಎಂಬಾತನನ್ನು ಶಿವಮೊಗ್ಗದ ತ್ಯಾವರೆಕೊಪ್ಪದ ಬಳಿ ಮಾಲು ಸಮೇತ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ಶಿಕ್ಷೆ ವಿಧಿಸಿದೆ.

ಈ ದಾಳಿಯಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ಮಲ್ಲಿಕಾರ್ಜುನ ಬಿ ಮತ್ತು ದಫೆದಾರ್ ಗಳಾದ ಗಣೇಶ್ ಬಿ ಸಿ, ರತ್ನಾಕರ್, ಗಿರೀಶ್ ಕುಮಾರ್ ಎಂ.ಸಿ, ಶಿವರುದ್ರಯ್ಯ, ಮಹಮದ್ ರಫೀಕ್, ಕೃಷ್ಣ ಜಿ ಮತ್ತು ಮಹೇಶ್ ಪಾಲ್ಗೊಂಡಿದ್ದರು.

ವರದಿ: ಪವನ್ ಕುಮಾರ್ ಕಠಾರೆ
ಜಾಹಿರಾತು

LEAVE A REPLY

Please enter your comment!
Please enter your name here